ಕರ್ನಾಟಕ

karnataka

ETV Bharat / sports

ಬಂದಿದ್ದು ಬ್ಯಾಟ್ಸ್​ಮನ್​ ಆಗಲು, ಆಗಿದ್ದು ವೇಗದ ಬೌಲರ್: ಡೆಲ್ಲಿ ತಂಡದ ದೇಶಪಾಂಡೆ ಕ್ರಿಕೆಟ್ ಜರ್ನಿಯಿದು! - ಐಪಿಎಲ್ 2020

25 ವರ್ಷದ ಬೌಲರ್​ ಬುಧವಾರ ನಡೆದ ರಾಜಸ್ಥಾನ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ 13 ರನ್​ಗಳ ರೋಚಕ ಜಯ ಸಾಧಿಸಲು ನೆರವಾಗಿದ್ದರು. ಅವರು ನಿನ್ನೆಯ ಪಂದ್ಯದಲ್ಲಿ 37 ರನ್​ ನೀಡಿ 2 ವಿಕೆಟ್​ ಪಡೆದು ಮಿಂಚಿದ್ದರು.

ತುಷಾರ್​ ದೇಶಪಾಂಡೆಯ
ತುಷಾರ್​ ದೇಶಪಾಂಡೆಯ

By

Published : Oct 15, 2020, 6:10 PM IST

ಮುಂಬೈ:ಮುಂಬೈನ ಶಿವಾಜಿ ಪಾರ್ಕ್​ ಜಿಮ್ಖಾನದಲ್ಲಿ ನಡೆಯುತ್ತಿದ್ದ ಆಟಗಾರರ ಆಯ್ಕೆಯ ಸಂದರ್ಭದಲ್ಲಿ ಬ್ಯಾಟ್ಸ್​ಮನ್​ ಆಗಬೇಕೆಂದು ಬಹುದೊಡ್ಡ ಸರದಿ ಸಾಲಿನಲ್ಲಿ ನಿಂತಿದ್ದ ಯುವಕ ತುಷಾರ್​ ದೇಶಪಾಂಡೆ ಇಂದು ಐಪಿಎಲ್​ನಲ್ಲಿ ವೇಗದ ಬೌಲರ್​ ಆಗಿ ಕ್ರಿಕೆಟ್​ ಗಮನ ಸೆಳೆಯುತ್ತಿದ್ದಾರೆ.

25 ವರ್ಷದ ಬೌಲರ್​ ಬುಧವಾರ ನಡೆದ ರಾಜಸ್ಥಾನ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ 13 ರನ್​ಗಳ ರೋಚಕ ಜಯ ಸಾಧಿಸಲು ನೆರವಾಗಿದ್ದರು. ಅವರು ನಿನ್ನೆಯ ಪಂದ್ಯದಲ್ಲಿ 37 ರನ್​ ನೀಡಿ 2 ವಿಕೆಟ್​ ಪಡೆದು ಮಿಂಚಿದ್ದರು.

ಅಕ್ಷರ್​ ಪಟೇಲ್ ಜೊತೆ ತುಷಾರ್​

ನಿನ್ನೆಯ ವರೆಗೂ ಕ್ರಿಕೆಟ್​ ಜಗತ್ತಿನಲ್ಲಿ ಅವರ ಹೆಸರೇ ಕೇಳದಿದ್ದ ಅದೆಷ್ಟೋ ಅಭಿಮಾನಿಗಳು ಇಂದು ಅವರ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಆದರೆ, ಈ ಯುವಕನ ಕ್ರಿಕೆಟ್​ ಜರ್ನಿ ಮಾಮೂಲಿ ಕ್ರಿಕೆಟಿಗರಿಗಿಂತ ಭಿನ್ನವಾಗಿದೆ, ಏಕೆಂದರೆ ಆತ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಆಗಬೇಕೆಂದು ಬಂದಿದ್ದ, ಆದರೆ ಆಗಿದ್ದ ಮಾತ್ರ ವೇಗದ ಬೌಲರ್​. ದೇಶ ಪಾಂಡೆ ಕುರಿತು ಆಸಕ್ತಿದಾಯಕ ಮಾಹಿತಿ ಅವರೇ ತಿಳಿಸಿದ್ದಾರೆ.

2007ರಲ್ಲಿ, ನಾನು ನನ್ನ ನಾಲ್ವರು ಗೆಳೆಯರೊಂದಿಗೆ ಕಲ್ಯಾಣದಿಂದ ಶಿವಾಜಿ ಪಾರ್ಕ್ ಜಿಮ್​ಖಾನದ ಬಿಪಿಎಲ್​ ಲೂಪ್ ಅಕಾಡೆಮಿಗೆ ಸೇರಲು ಹೋಗಿದ್ದೆವು. ಅಲ್ಲಿ ಬ್ಯಾಟ್ಸ್​ಮನ್​ಗಳ ಸರದಿ ದೊಡ್ಡದಾಗಿತ್ತು. ಸುಮಾರು 40 ಜನರಿದ್ದ ಸರದಿಯಲ್ಲಿ 20-25 ಬ್ಯಾಟ್ಸ್​ಮನ್​ಗಳು ಪ್ಯಾಡ್​ ಕಟ್ಟಿ ನಿಂತಿದ್ದರು.

ಆದರೆ, ಬೌಲರ್​ಗಳ ಸಾಲಿನಲ್ಲಿ ಕೇವಲ 15ರಿಂದ 20 ಆಕಾಂಕ್ಷಿಗಳಿದ್ದರು. ಆಗ ಸಮಯ 3 ಗಂಟೆಯಾಗಿತ್ತು. 6ರಿಂದ 6:30 ವರೆಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಹಾಗಾಗಿ ಬ್ಯಾಟ್ಸ್​ಮನ್​ಗಳ ಸಾಲು ತುಂಬಾ ದೊಡ್ಡದಿರುವುದರಿಂದ ನನಗೆ ಅವಕಾಶ ಸಿಗುವುದು ಕಡಿಮೆ ಎಂದು ಆಲೋಚಿಸಿ, ಬರಿಗೈಯಲ್ಲಿ ಮನೆಗೆ ತೆರಳಲು ಇಷ್ಟವಿಲ್ಲದೇ ಬೌಲರ್​ಗಳ ಲೈನ್​ನಲ್ಲಿ ನಿಂತೆ ಎಂದು ಮರಾಠಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ನಂತರ ತಮ್ಮ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾತನಾಡುತ್ತಾ, ಅಲ್ಲಿ ಬೌಲರ್​ ಲೈನ್​ ವೇಗವಾಗಿ ಚಲಿಸಿತು. ಅದೃಷ್ಟವಶಾತ್​ ನಾನು ಬೌಲಿಂಗ್ ಮಾಡುವ ವೇಳೆಗೆ ಹೊಸ ಬಾಲ್​ ಪಡೆದುಕೊಂಡೆ. ನಂತರ ಬೌಲಿಂಗ್ ಮಾಡಿದೆ, ಅದು ಅದ್ಭುತ ಔಟ್​ಸ್ವಿಂಗ್​ ಆಗಿತ್ತು. ಅದನ್ನು ನೋಡಿದ ಪ್ಯಾಡಿ ಸರ್​( ಪದ್ಮಾಕರ್ ಶಿವಾಲ್ಕರ್​) ಚೆನ್ನಾಗಿ ಬೌಲಿಂಗ್ ಮಾಡಿದೆ, ಮತ್ತೊಮ್ಮೆ ಅದೇ ರೀತಿ ಮಾಡು ಎಂದರು.

ಆ ಸಂದರ್ಭದಲ್ಲಿ ಅವರು ಯಾರು ಎಂದೂ ನನಗೆ ತಿಳಿದಿರಲಿಲ್ಲ. ಆದರೆ ನಾನು ಮತ್ತೆ 6ರಿಂದ7 ಎಸೆತಗಳನ್ನು ಅದೇ ರೀತಿ ಮಾಡಿದೆ. ನಂತರ ನನ್ನ ಹೆಸರನ್ನು ಶಾರ್ಟ್​ಲಿಸ್ಟ್​ನಲ್ಲಿ ಸೇರಿಕೊಂಡೆ ಎಂದು ಕ್ಲಬ್​ಗೆ ಎಂಟ್ರಿಯಾದ ಪ್ರಸಂಗವನ್ನು ನೆನಪಿಸಿಕೊಂಡಿದ್ದರು.

ನಂತರ ಎರಡು ಮೂರು ದಿನಗಳ ಕಾಲ ಇದೇ ಘಟನೆ ಮರುಕಳಿಸಿತು. ಪ್ಯಾಡಿ ಸರ್​ ಹಾಗೂ ಸಂದೇಶ್​ ಕಾವಳೆ ಸರ್​ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ನಂತರ ನಾನು ಜಿಮ್​ಖಾನ ಕ್ಲಬ್​ನಲ್ಲಿ ವೇಗಿಯಾಗಿ ಮುಂದುವರಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details