ಸಿಡ್ನಿ(ಆಸ್ಟ್ರೇಲಿಯಾ):ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡದ ನಡುವಿನ ಮೂರು ದಿನಗಳ ಪಿಂಕ್ ಬಾಲ್ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.
ಉತ್ತಮ ಜೊತೆಯಾಟವಾಡಿದೆ ಬೆನ್ ಮೆಕ್ಡೆರ್ಮೊಟ್ (107) ಮತ್ತು ಜ್ಯಾಕ್ ವಿಲ್ಡರ್ಮುತ್ (111) ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 4 ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ.
ಮೂರನೇ ದಿನದ ಎರಡನೇ ಸೆಶನ್ ಆರಂಭಿಸಿದ ಅಲೆಕ್ಸ್ ಕ್ಯಾರಿ ಮತ್ತು ಮೆಕ್ಡೆರ್ಮೊಟ್ ನಾಲ್ಕನೇ ವಿಕೆಟ್ಗೆ 117 ರನ್ ಗಳಿಸಿದ್ರು. ಐವತ್ತು ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕ್ಯಾರಿ (58) ಸಿಕ್ಸರ್ ಸಿಡಿಸುವ ಯತ್ನದಲ್ಲಿ ಹನುಮ ವಿಹಾರಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಜೊತೆಯಾದ ಮೆಕ್ಡೆರ್ಮೊಟ್ ಮತ್ತು ವಿಲ್ಡರ್ಮುತ್ ಕ್ರೀಸ್ ಕಚ್ಚಿನಿಂತು ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದ್ರು.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಎ ತಂಡ 194 ರನ್ಗಳಿಗೆ ಸರ್ವಪತನ ಕಂಡಿತ್ತು. ಭಾರತೀಯ ಬೌಲರ್ಗಳ ದಾಳಿಗೆ ನಲುಗಿದ್ದ ಆಸ್ಟ್ರೇಲಿಯಾದ ಎ ತಂಡ ಕೇವಲ 108 ರನ್ಗಳಿಗೆ ಆಲ್ಔಟ್ ಆಗಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಟೀಂ ಇಂಡಿಯಾ ಆಟಗಾರರು 4 ವಿಕೆಟ್ ನಷ್ಟಕ್ಕೆ 386 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿದ್ರು.