ಕರ್ನಾಟಕ

karnataka

ETV Bharat / sports

ಎಂಎಸ್​ ಧೋನಿಯ ಟಾಪ್​ 5 'ಕ್ಯಾಪ್ಟನ್​ ಕೂಲ್' ನಿರ್ಧಾರಗಳು - Dhoni

ಶನಿವಾರ ಮಹೇಂದ್ರ ಸಿಂಗ್​ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​ ಘೋಷಣೆ ಮಾಡಿದ್ದರು. ಇನ್ಸ್ಟಾಗ್ರಾಮ್​ನಲ್ಲಿ ತಮ್ಮ 16 ವರ್ಷಗಳ ವೃತ್ತಿ ಜೀವನದ ಪಯಣವನ್ನು ನೆನಪಿಸುವ ಒಂದು ವಿಡಿಯೋ ಮೂಲಕ ನಿವೃತ್ತಿ ಖಚಿತಪಡಿಸಿದ್ದರು.

ಧೋನಿಯ ಟಾಪ್​ 5 'ಕ್ಯಾಪ್ಟನ್​ ಕೂಲ್' ನಿರ್ಧಾರಗಳು
ಧೋನಿಯ ಟಾಪ್​ 5 'ಕ್ಯಾಪ್ಟನ್​ ಕೂಲ್' ನಿರ್ಧಾರಗಳು

By

Published : Aug 16, 2020, 7:56 PM IST

ಮುಂಬೈ: ಎಂಎಸ್​ ಧೋನಿ ಎಂದರೆ ಮೊದಲಿಗೆ ಬರೋದೇ ಅವರ ಗೇಮ್​ ಫಿನಿಸಿಂಗ್​. ಆದರೆ ಅಷ್ಟೇ ಮಹತ್ವ ಅವರ ನಾಯಕತ್ವದಲ್ಲಿ ಇತ್ತು. ಅವರ ಚಾಣಾಕ್ಷ ನಾಯಕತ್ವದಿಂದಲೇ ಕೆಲವು ಮಹತ್ವದ ಟೂರ್ನಿಗಳು ಭಾರತದ ಪಾಲಾದವು ಎನ್ನುವುದರಲ್ಲಿ ಎರಡು ಮಾತಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಅನೇಕ ದಿಗ್ವಿಜಯಗಳನ್ನು ಸಾಧಿಸಿದೆ.

ಶನಿವಾರ ಮಹೇಂದ್ರ ಸಿಂಗ್​ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​ ಘೋಷಣೆ ಮಾಡಿದ್ದರು. ಇನ್ಸ್ಟಾಗ್ರಾಮ್​ನಲ್ಲಿ ತಮ್ಮ 16 ವರ್ಷಗಳ ವೃತ್ತಿ ಜೀವನದ ಪಯಣವನ್ನು ನೆನಪಿಸುವ ಒಂದು ವಿಡಿಯೋ ಮೂಲಕ ನಿವೃತ್ತಿ ಖಚಿತಪಡಿಸಿದ್ದರು.

ಧೋನಿ ಕ್ರಿಕೆಟ್​ನಿಂದ ಮರೆಯಾಗುತ್ತಿರಬಹುದು ಆದರೆ ಕ್ರಿಕೆಟ್​ನಲ್ಲಿ ಅವರ ಸಾಧನೆ , ನಾಯಕತ್ವದ ತಂತ್ರಗಾರಿಕೆ ಮಾತ್ರ ಎಂದಿಗೂ ಅಭಿಮಾನಿಗಳು ಮರೆಯಾರರು. ಧೋನಿ ನಾಯಕತ್ವದಲ್ಲಿ 149 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲೇ ಕ್ಲೀನ್​ ಸ್ವೀಪ್​ ಸಾಧಿಸಿದ ಕೀರ್ತಿ ಧೋನಿ ನಾಯಕತ್ವಕ್ಕೆ ಸಲ್ಲುತ್ತದೆ.ಅಲ್ಲದೆ ಐಸಿಸಿ ಆಯೋಜಿಸುವ ಎಲ್ಲ ಟ್ರೋಫಿಗಳನ್ನು ಭಾರತಕ್ಕೆ ತಂದುಕೊಟ್ಟ ಶ್ರೇಯ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸಿದರಲ್ಲದೇ, ನಂಬರ್​ ಒನ್​ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ರಾಂಚಿ ಕ್ರಿಕೆಟಿಗನಿಗೆ ಸಲ್ಲುತ್ತದೆ.

ಭಾರತ ಕ್ರಿಕೆಟ್​ನಲ್ಲಿ ನಾಯಕನಾಗಿ ಅವರು ತೆಗೆದುಕೊಂಡ ಪ್ರಮುಖ 5 ನಿರ್ಧಾರಗಳ ಹೇಗಿದ್ದವು, ಅವು ಹೇಗೆ ಪಂದ್ಯದ ಗತಿಯನ್ನು ಬದಲಿಸಿದವು ಎಂದು ತಿಳಿದುಕೊಳ್ಳೋಣ

2007 ರವಿಶ್ವಕಪ್​ನಲ್ಲಿ ಜೋಗಿಂದರ್ ಶರ್ಮಾಗೆ ಕೊನೆಯ ಓವರ್​

​ಟಿ-20 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಚೊಚ್ಚಲ ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ಎದುರಾಗಿತ್ತು.​ ಭಾರತ ನೀಡಿದ್ದ ಗುರಿಯನ್ನು ಬೆನ್ನೆತ್ತಿದ್ದ ಪಾಕ್​ ತಂಡಕ್ಕೆ. ಅಂತಿಮ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್‌ಗಳ ಅವಶ್ಯಕತೆಯಿತ್ತು. ಪಾಕ್ ಆ ವೇಳೆಗಾಗಲೇ ತನ್ನ 9 ವಿಕೆಟ್ ಕಳೆದುಕೊಂಡಿತ್ತಾದರೂ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್‌ನಲ್ಲಿದ್ದರು.

ಧೋನಿ ಮುಂದೆ ಭಜ್ಜಿಯಂತಹ ಅನುಭವಿಯ ಆಯ್ಕೆಗಳಿದ್ದರೂ ಅವರು ಅನನುಭವಿ ಜೋಗಿಂದರ್​ ಶರ್ಮಾಗೆ ಬೌಲಿಂಗ್ ನೀಡಿದ್ದರು. ಮೊದಲೆರಡು ಎಸೆತದಲ್ಲಿ ಸಿಕ್ಸರ್​, ವೈಡ್​ ನೀಡಿದ್ದ ಶರ್ಮಾ ನಂತರದ ಎಸೆತದಲ್ಲಿ ಮಿಸ್ಬಾ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಭಾರತ ವಿಶ್ವಕಪ್​ ಚಾಂಪಿಯನ್​ ಆಗಿ ಹೊರ ಹೊಮ್ಮಿತು.

2007 ಟಿ20 ವಿಶ್ವಕಪ್​

2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ನಲ್ಲಿ ಬೌಲರ್​ಗಳಿಗೆ ನೀಡಿದ ಸೂಚನೆ​

ಧೋನಿ ನಾಯಕನಾಗಿ ಆಯ್ಕೆಯಾಗಿದ್ದ 3ನೇ ಟೆಸ್ಟ್​ನಲ್ಲಿ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಧೋನಿ ಬಹಳಷ್ಟು ಟೀಕೆಗೆ ಗುರಿಯಾದರು, ಆದರೆ ಅದರ ಫಲಿತಾಂಶ ಧೋನಿ ಪರವೇ ಬಂದಿತ್ತು.2008ರ ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಲ್ಲಿ ಭಾರತ ಮೊದಲ ಮೂರು ಟೆಸ್ಟ್​ಗಳಲ್ಲಿ ಒಂದು ಟೆಸ್ಟ್​ ಗೆದ್ದು, ಎರಡರಲ್ಲಿ ಡ್ರಾ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಅಂತಿಮ ಟೆಸ್ಟ್​ ನಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ 441 ರನ್​ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ಎರಡನೇ ದಿನದಂತ್ಯಕ್ಕೆ 3.9 ರನ್​ರೇಟ್​ನಲ್ಲಿ 189 ಕ್ಕೆ 2 ವಿಕೆಟ್​ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು.

ಮೂರನೇ ದಿನ ಧೋನಿ ಬೌಲರ್​ಗಳಿಗೆ, ಔಟ್ಸೈಡ್​​​ನಿಂದ ಬೌಲಿಂಗ್​ ಮಾಡಲು ಸೂಚನೆ ನೀಡುತ್ತಿದ್ದರು. ಈ ನಿರ್ಧಾರದಿಂದ ಬ್ಯಾಟ್ಸ್​ಮನ್​ಗಳಿಗೆ ಅಟ್ಯಾಕ್​ ಮಾಡಲು ಸುಲಭವಾಗುತ್ತಿದೆ ಎಂದು ಕಾಮೆಂಟೇಟರ್​ಗಳು ದೂರಿದ್ದಲ್ಲದೇ, ಡ್ರಾ ಸಾಧಿಸಿ ಸರಣಿ ಗೆಲ್ಲುವುದನ್ನು ಬಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಧೋನಿ ಟೀಕಿಸಿದ್ದರು.ಆದರೆ, ಎಲ್ಲರ ಆಲೋಚನೆ ತಲೆಕೆಳಗಾಗಿತ್ತು. ಆಸ್ಟ್ರೇಲಿಯ ಹಿಂದಿನ ಮೊತ್ತಕ್ಕೆ 166ರನ್​ ಸೇರಿಸಿ 355 ರನ್​ಗಳಿಗೆ ಸರ್ವಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಸೆಹ್ವಾಗ್​ರ 92 ರನ್​ ಹಾಗೂ ಸ್ವತಃ ಧೋನಿಯೇ ಅಬ್ಬರದ ಅರ್ಧಶತಕ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ 382 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನೆಟ್ಟಿದ ಆಸ್ಟ್ರೇಲಿಯಾ 210 ರನ್​ಗಳಿಗೆ ಆಲೌಟ್​ ಆಗುವ ಮೂಲಕ 172 ರನ್​ಗಳಿಂದ ಸೋಲನುಭವಿಸಿತ್ತು. ಭಾರತ ತಂಡ 2-0ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಸಾಧಿಸಿತ್ತು.

2011ರ ವಿಶ್ವಕಪ್​ ಫೈನಲ್​

2011ರ ವಿಶ್ವಕಪ್​ ಫೈನಲ್​ನಲ್ಲಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಿರ್ಧಾರ

2011ರ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡಕ್ಕಿಂತ ಮೊದಲು ಬ್ಯಾಟಿಂಗ್​ ಮಾಡಿದ್ದ ಶ್ರೀಲಂಕಾ ತಂಡ 275 ರನ್​ಗಳ ಗುರಿ ನೀಡಿತ್ತು. ಈ ಸಂದರ್ಭದಲ್ಲಿ ಸಚಿನ್​ ಹಾಗೂ ಸೆಹ್ವಾಗ್​ ವಿಕೆಟ್​ ಕಳೆದುಕೊಂಡಿತ್ತು. ಇನ್ನು 113 ರನ್​ಗಳಾಗುವಷ್ಟರಲ್ಲಿ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಈ ಸಂದರ್ಭದಲ್ಲಿ ಟೂರ್ನಿಯಲ್ಲಿ 90ರ ಸರಾಸರಿಯಲ್ಲಿ 360 ರನ್​ಗಳಿಸಿ ಅದ್ಭುತ ಪ್ರದರ್ಶನ ತೋರಿದ್ದ ಯುವರಾಜ್​​ ಸಿಂಗ್​ ಬದಲು ತಾವೇ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದರು. ಈ ನಿರ್ಧಾರ ಹಲವರ ಹುಬ್ಬೇರುವಂತೆ ಮಾಡಿತ್ತು. ಆದರೆ, ಧೋನಿ ಫೈನಲ್​ ಪಂದ್ಯದಲ್ಲಿ ಕೇವಲ 79 ಎಸೆತಗಳಲ್ಲಿ 91 ರನ್​ ಸಿಡಿಸಿ ಭಾರತಕ್ಕೆ 28 ವರ್ಷಗಳ ಬಳಿಕೆ ವಿಶ್ವಕಪ್​ ತಂದುಕೊಡುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಅವರು ಪಡೆದರು.

2013 ರ ಚಾಂಪಿಯನ್​ ಟ್ರೋಫಿ

2013ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲಿ ಇಶಾಂತ್​ ಮೇಲೆ ನಂಬಿಕೆ

2013 ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲಿ ಮಳೆ ಕಾರಣ 20 ಓವರ್​ಗಳ ಪಂದ್ಯ ನಡೆದಿತ್ತು. ಭಾರತ ಕೇಲವ 129 ರನ್​ಗಳಿಸಿತ್ತು. 130 ರನ್​ಗಳ ಮೊತ್ತವನ್ನು ಚೇಸ್​ ಮಾಡಿದ್ದ ಇಂಗ್ಲೆಂಡ್​ ತಂಡಕ್ಕೆ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 6 ವಿಕೆಟ್​ಗಳ ಇದ್ದಂತೆ 28 ರನ್​ಗಳ ಅಗತ್ಯವಿತ್ತು.

ಈ ಸಂದರ್ಭದಲ್ಲಿ 18 ಓವರ್​ ಎಸೆಯಲು ಧೋನಿ ಮುಂದೆ ಇಶಾಂತ್​,ಉಮೇಶ್​ ಹಾಗೂ ಭುವನೇಶ್ವರ್​ ಮೂರು ಆಯ್ಕೆಗಳಿದ್ದವು. ಈಗಾಗಲೆ ಇಶಾಂತ್​ ಮೊದಲ ಮೂರು ಓವರ್​ಗಳಲ್ಲಿ 28 ರನ್​ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಆದರೂ ಧೋನಿ ಇಶಾಂತ್​ಗೆ ಬೌಲಿಂಗ್​ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಆದರೆ,ಇಶಾಂತ್​ ಕ್ರೀಸ್​ನಲ್ಲಿ ಸೆಟ್​​​ ಆಗಿದ್ದ ಇಯಾನ್​ ಮಾರ್ಗನ್​ ಹಾಗೂ ರವಿ ಬೊಪೆರಾ ವಿಕೆಟ್​ ಪಡೆದರು. ಕೊನೆಗೆ ಭಾರತ ತಂಡ 5 ರನ್​ಗಳ ಜಯದೊಂದಿಗೆ ಚಾಂಪಿಯನ್​ ಟ್ರೋಫಿ ಮುಡಿಗೇರಿಸಿಕೊಂಡಿತು.

2016 ಏಷ್ಯಾಕಪ್​ ರನ್​ಔಟ್​

ಬಾಂಗ್ಲಾದೇಶದ ವಿರುದ್ಧ ಒಂದು ಕೈನ ಗ್ಲೌಸ್​ ತೆಗೆದು ಕೀಪಿಂಗ್

​2016ರ ಟಿ-20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಓವರ್​ನಲ್ಲಿ 11 ರನ್​ಗಳನ್ನು ಡಿಫೆಂಡ್​ ಮಾಡಬೇಕಿತ್ತು. ಪಾಂಡ್ಯ ಎಸೆದ ಮೊದಲ ಎಸೆತದಲ್ಲಿ ಸಿಂಗಲ್​ ಬಂದರೆ, ನಂತರದ ಎರಡು ಎಸೆತಗಳಲ್ಲಿ ರಹೀಮ್​ ಬೌಂಡರಿ ಬಾರಿಸಿ ಗೆಲುವನ್ನು ಕಸಿದುಕೊಂಡಿದ್ದರು. ಆದರೆ, ನಾಲ್ಕು ಮತ್ತು 5ನೇ ಎಸೆತಗಳಲ್ಲಿ ರಹೀಮ್​ ಹಾಗೂ ಮಹಮದುಲ್ಲಾ ಕ್ಯಾಚ್​ ಔಟ್​ ಆದರು. ಕೊನೆಯ ಎಸೆತದಲ್ಲಿ ಬಾಂಗ್ಲಾಗೆ ಗೆಲ್ಲಲು 2 ರನ್​ಗಳ ಅಗತ್ಯವಿತ್ತು.ಈ ಸಂದರ್ಭದಲ್ಲಿ ಒಂದು ರನ್​ಗಳಿಸಿದರೂ ಡ್ರಾಗೊಳ್ಳುವ ಸಾಧ್ಯತೆಯಿತ್ತು. ಆದರೆ ಧೋನಿ ತಮ್ಮಬಲಗೈನ ಗ್ಲೌಸ್​​​ ತೆಗೆದು ಹಾಕಿ ಕೀಪಿಂಗ್​ ಮಾಡಿದ್ದರು. ಕೊನೆಯ ಎಸೆತ ತಮ್ಮ ಕೈಗೆ ಬರುತ್ತಿದ್ದಂತೆ ವೇಗವಾಗಿ ಓಡಿ ರನ್​ಔಟ್​ ಮಾಡುವಲ್ಲಿ ಯಶಸ್ವಿಯಾದರು. ಕೊನೆಗೆ ಒಂದು ರನ್​ನಿಂದ ಗೆದ್ದು ಕ್ವಾರ್ಟರ್​ ಫೈನಲ್​ ಪ್ರವೇಶಿಸಿತ್ತು.

ABOUT THE AUTHOR

...view details