ಹೈದರಾಬಾದ್: ಕಾಲಕ್ರಮೇಣ ಕ್ರಿಕೆಟ್ ಬದಲಾಗುತ್ತಿದೆ. ಈ ಹಿಂದೆ ಕೇವಲ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿದ್ದ ಜಂಟಲ್‌ಮನ್ಸ್ ಗೇಮ್ ದಿನಕಳೆದಂತೆ ಟಿ-20 ಹಾಗೂ ಟಿ-10 ಲೀಗ್ಗಳಲ್ಲೂ ನಡೆಯಲು ಶುರುವಾಯ್ತು. ಈ ಹಿಂದೆ ಚಾಣಾಕ್ಷತನದಿಂದ ಕ್ರಿಕೆಟ್ ಆಡುವ ಆಟಗಾರರ ಒಂದು ಬಳಗವೇ ಇತ್ತು. ಆದರೀಗ ಹೊಡಿ-ಬಡಿ ಆಟಕ್ಕೆ ಹೆಚ್ಚು ಪ್ರಾಶಸ್ತ್ಯ. ಈ ಪಾರ್ಮೆಟ್‌ಗೆ ಹೊಂದುವ ಆಟಗಾರರ ಸಂಖ್ಯೆಯೇ ಜಾಸ್ತಿ. ಇದಕ್ಕೆ ಸಮನಾಗಿ ಚೆಂಡು ದಂಡಿನ ಆಟದಲ್ಲಿ ಹೊಸ ಹೊಸ ತಂತ್ರಜ್ಞಾನವೂ ಬಂದಿದೆ.
ಇಂದಿನ ಕ್ರಿಕೆಟ್ ಹಾಗೂ 80-90ರ ದಶಕದಲ್ಲಿನ ಕ್ರಿಕೆಟ್ ಆಟಕ್ಕೂ ಸಿಕ್ಕಾಪಟ್ಟೆ ಬದಲಾವಣೆ ಆಗಿದ್ದರೂ, ಅಂದಿನ ಕೆಲ ಪ್ಲೇಯರ್ಸ್ ಟಿ-20 ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿದ್ದರು.
1990ರ ಶತಕದಲ್ಲಿ ಈ ಆಟದಲ್ಲಿ ವಿಶೇಷ ಛಾಪು ಮೂಡಿಸಿದ್ದ ಐವರು ಆಟಗಾರರು ತಮ್ಮ ವೃತ್ತಿ ಬದುಕಿನಲ್ಲಿ ಟಿ-20 ಕ್ರಿಕೆಟ್ ಟೂರ್ನಿ ಆಡಿಲ್ಲವಾದರೂ, ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ಸ್ಟ್ರೈಕ್ ರೇಟ್ ಹೊಂದಿರುವ ಕಾರಣ ಟಿ-20ಯಲ್ಲಿ ಮಿಂಚುವ ಎಲ್ಲಾ ಸಾಧ್ಯತೆಗಳಿದ್ದವು. ಅಂತಹ ಐವರು ಆಟಗಾರರು ಇವರು..
ಬಿಎಲ್ ಕೇರ್ನ್ಸ್
ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಆಗಿದ್ದ ಈತ 1974-1985ರ ಅವಧಿಯಲ್ಲಿ ಕ್ರಿಕೆಟ್ ಆಡಿದ್ದು, ಸ್ವಿಂಗ್ ಬೌಲರ್ ಎಂದು ಗುರುತಿಸಿಕೊಂಡಿದ್ದರು. ಅದ್ಭುತ ಸ್ಟ್ರೈಕ್ ರೇಟ್ ಕೂಡ ಇವರು ಹೊಂದಿದ್ದರು.
78 ಏಕದಿನ ಪಂದ್ಯಗಳನ್ನಾಡಿರುವ ಈ ಕೈರ್ನ್ಸ್ 65 ಇನ್ನಿಂಗ್ಸ್ ಮೂಲಕ 987 ರನ್ ಸಂಪಾದಿಸಿದ್ದು, 104.89 ಸರಾಸರಿ ಹೊಂದಿದ್ದರು. ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಇವರು 41 ಸಿಕ್ಸರ್ ಸಿಡಿಸಿದ್ದಾರೆ. 1983ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇವರ ಬ್ಯಾಟ್‌ನಿಂದ 6 ಭರ್ಜರಿ ಸಿಕ್ಸರ್ ಸಿಡಿದಿತ್ತು.
ಇಯಾನ್ ಸ್ಮಿತ್
ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. 1980ರಿಂದ 1992ರ ಅವಧಿಯಲ್ಲಿ 98 ಏಕದಿನ ಪಂದ್ಯಗಳನ್ನಾಡಿರುವ ಇವರು ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದರು.
90 ದಶಕದಲ್ಲಿ 29 ಇನ್ನಿಂಗ್ಸ್ ಮೂಲಕ ಬ್ಯಾಟ್ ಬೀಸಿದ್ದ ಸ್ಮಿತ್ ಸ್ಟ್ರೈಕ್ ರೇಟ್ 120.22. ಪಾಕ್ ವಿರುದ್ಧ 31 ಎಸೆತಗಳಲ್ಲಿ 47ರನ್. ಇಂಗ್ಲೆಂಡ್ ವಿರುದ್ಧ 17 ಎಸೆತಗಳಲ್ಲಿ 25 ರನ್ ಹಾಗೂ 21 ಎಸೆತಗಳಲ್ಲಿ ಅಜೇಯ 42 ರನ್ಗಳಿಕೆ ಇವರ ವಿಶೇಷ ಸಾಧನೆ. ಇದೇ ಆಟಗಾರ ಶ್ರೀಲಂಕಾ ವಿರುದ್ಧ 30 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದ್ದರು. 1992ರಲ್ಲಿ ವಿಶ್ವಕಪ್ ತಂಡದಲ್ಲಿ ಈ ಪ್ಲೇಯರ್ ಭಾಗಿಯಾಗಿದ್ದರು. ಟೆಸ್ಟ್ನಲ್ಲೂ ಅಚ್ಚೊತ್ತಿದ್ದ ಇವರು ಟಿ-20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತಹ ಆಟಗಾರ ಅಲ್ವೇ?