ಮುಂಬೈ: ವಿಶ್ವ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ನಲ್ಲಾಡುವು ಪ್ರಸ್ತುತ ಕ್ರಿಕೆಟಿಗರೆಲ್ಲರ ಕನಸಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿ ದೇಶ ವಿದೇಶದ ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕಾಯುತ್ತಿರುತ್ತಾರೆ.
ಐಪಿಎಲ್ನಲ್ಲಿ ಅವಕಾಶ ಸಿಗುವುದು ಕೆಲವರಿಗೆ ಕನಸಾದರೆ ಇನ್ನು ಕೆಲವರಿಗೆ ಐಪಿಎಲ್ ಟ್ರೋಫಿ ಗೆಲ್ಲುವುದು ಕನಸಾಗಿರುತ್ತದೆ. ಐಪಿಎಲ್ನಲ್ಲಿ ಕಳೆದ 10ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಆಡಿರುವ , ಇನ್ನು ಕೆಲವರು 12 ಆವೃತ್ತಿಗಳನ್ನಾಡಿದ್ದರು ಇನ್ನು ಒಮ್ಮೆಯೂ ಐಪಿಎಲ್ ಟ್ರೋಪಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಅಂತಹ ಕೆಲವು ಟಾಪ್ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ ನೋಡಿ.
ವಿರಾಟ್ ಕೊಹ್ಲಿ
ಮೊದಲ ಆವೃತ್ತಿಯಿಂದಲೂ ಆರ್ಸಿಬಿ ತಂಡದಲ್ಲಿ ಆಡುತ್ತಿರುವ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ(5412) ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳಿಸಿರುವ ದಾಖಲೆ ಹೊಂದಿದ್ದಾರೆ. ದುರಾದೃಷ್ಟವೆಂದರೆ ಆರ್ಸಿಬಿ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆರ್ಸಿಬಿ 2009, 2011 ಹಾಗೂ 2016ರಲ್ಲಿ ಫೈನಲ್ನಲ್ಲಿ ಸೋಲು ಕಂಡು ನಿರಾಸೆಯನುಭವಿಸಿದೆ. 13 ನೇ ಆವೃತ್ತಿಯಲ್ಲಾದರೂ ವಿರಾಟ್ ಟ್ರೋಫಿ ಎತ್ತಿ ಹಿಡಿಯಲಿದ್ದಾರ ಎಂದು ಕಾದು ನೋಡಬೇಕಿದೆ.
ಎಬಿಡಿ ವಿಲಿಯರ್ಸ್
ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ 2008ರಿಂದ 2010ರವರೆಗೆ ಡೆಲ್ಲಿ ಡೇರ್ ಡೇವಿಲ್ಸ್ ಪರ ಮತ್ತು 2011ರಿಂದ ಆರ್ಸಿಬಿ ತಂಡದ ಪರ ಆಡುತ್ತಿದ್ದಾರೆ. ಇವರ ಕೂಡ 12 ಆವೃತ್ತಿಯಲ್ಲಿ ಕಾನಿಸಿಕೊಂಡಿದ್ದು, ಇವರು ಪ್ರತಿನಿಧಿಸಿದ ಯಾವುದೇ ತಂಡ ಟ್ರೋಫಿ ಎತ್ತಿ ಹಿಡಿದಿಲ್ಲ. ವಿಲಿಯರ್ಸ್ 154 ಪಂದ್ಯಗಳನ್ನಾಡಿದ್ದ 4395 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 33 ಅರ್ಧಶತಕ ಸೇರಿದೆ. ಎಬಿಡಿ ಕೂಡ ಎರಡು ಬಾರಿ ಫೈನಲ್ ಆಡಿದ್ದಾರೆ.