ಕೋಲ್ಕತ್ತ: ಐಸಿಸಿ 2023ರಿಂದ ಜಾರಿಗೆ ತರಲು ಬಯಸಿರುವ ನಾಲ್ಕು ದಿನಗಳ ಟೆಸ್ಟ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಲು ಇದು ಸರಿಯಾದ ಸಮಯವಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಐಸಿಸಿಯ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆಯೋಜನೆ ಬಗ್ಗೆ ಗಂಗೂಲಿ ಹೇಳಿದ್ದೇನು?
2023ರ ಹಾಗೂ 2031ರ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 5 ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಚಿಂತಿನೆ ನಡೆಸಿದೆ.
2023ರ ಹಾಗೂ 2031ರ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 5 ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಚಿಂತಿನೆ ನಡೆಸಿದೆ.
ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್ ಕ್ರಿಕೆಟ್ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶ ಹಾಗೂ ಬಿಸಿಸಿಐ ತನ್ನದೇ ಆದ ದ್ವಿಪಕ್ಷೀಯ ಸರಣಿ ಆಯೋಜನೆ ಕ್ಯಾಲೆಂಡರ್ ವರ್ಷದಲ್ಲಿ ಪಾಲು ಕೇಳಿರುವುದರಿಂದ ಐಸಿಸಿ ಹೊಸ ಆಲೋಚನೆಗೆ ಮುಂದಾಗಿದೆ. ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.
ಆದರೆ ಈ ಕುರಿತು ಮಾತನಾಡಿರುವ ಗಂಗೂಲಿ " ಮೊದಲು ನಾವು ಐಸಿಸಿಯ ಪ್ರಸ್ತಾವನೆಯನ್ನು ನೋಡಬೇಕಾಗಿದೆ, ಅದು ಬರಲಿ ಮತ್ತು ನಂತರ ನಾವು ನೋಡೋಣ. ಈಗಲೆ ಅದರ ಬಗ್ಗೆ ಹೇಳಿಕೆ ನೀಡಲಾಗುವುದಿಲ್ಲ" ಎಂದು ಗಂಗೂಲಿ ಇಲ್ಲಿ ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.