ಚೆನ್ನೈ: ಇದೇ ತಿಂಗಳಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಗಾಗಿ ಟಿಎನ್‌ಸಿಎ ಘೋಷಿಸಿದ್ದ ತಮಿಳುನಾಡು ತಂಡದಿಂದ ಭಾರತ ತಂಡದ ವೇಗಿ ಟಿ.ನಟರಾಜನ್ ಅವರನ್ನು ಕೈಬಿಟ್ಟಿದೆ. ಬಿಸಿಸಿಐ ಮನವಿಗೆ ಸ್ಪಂದಿಸಿ ಬೋರ್ಡ್ ಈ ನಿರ್ಧಾರ ತೆಗೆದುಕೊಂಡಿದೆ.
ಬಿಸಿಸಿಐ ಮತ್ತು ಭಾರತೀಯ ತಂಡದ ಆಡಳಿತ ಮಂಡಳಿ ನಟರಾಜನ್ ಅವರನ್ನು ಇಂಗ್ಲೆಂಡ್ ವಿರುದ್ಧದ ವೈಟ್ - ಬಾಲ್ ಸರಣಿಗೆ ಹೊಸ ಉತ್ಸಾಹದಲ್ಲಿ ಕಾಣಬೇಕೆಂದು ಬಯಸಿದೆ. ಹಾಗಾಗಿ ಭಾರತೀಯ ತಂಡದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಹೌದು ಈ ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಕಾರ್ಯದರ್ಶಿ ಆರ್ಎಸ್ ರಾಮಸ್ವಾಮಿ ಮಾಧ್ಯಮಕ್ಕೆ ತಿಳಿಸಿದ್ದಾರೆ.