ಕರ್ನಾಟಕ

karnataka

ETV Bharat / sports

ಭಾರತದ ಆರಂಭಿಕರು ಅನನುಭವಿಗಳಾಗಿರಬಹುದು, ಆದ್ರೆ ಶ್ರೇಷ್ಠ ಆಟಗಾರರು: ಸೌಥಿ - ಮಯಾಂಕ್​ ಅಗರವಾಲ್​

ಕಿವೀಸ್​ ವಿರುದ್ಧ ಆರಂಭಗೊಳ್ಳಲಿರುವ ಟೆಸ್ಟ್​ ಸರಣಿಗಾಗಿ ಟೀಂ ಇಂಡಿಯಾ ಸನ್ನದ್ಧವಾಗುತ್ತಿದ್ದು, ಇದೀಗ ಕೊಹ್ಲಿ ಪಡೆಯ ಆರಂಭಿಕ ಜೋಡಿ ಬಗ್ಗೆ ನ್ಯೂಜಿಲ್ಯಾಂಡ್​ ವೇಗಿ ಟಿಮ್​ ಸೌಥಿ ಮಾತನಾಡಿದ್ದಾರೆ.

team India
team India

By

Published : Feb 19, 2020, 7:43 PM IST

ವೆಲ್ಲಿಂಗ್ಟನ್​:ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಆರಂಭಿಕರಾಗಿ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಹಾಗೂ ಪೃಥ್ವಿ ಶಾ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ. ಈ ಜೋಡಿ ಕುರಿತು ಕಿವೀಸ್​ ತಂಡದ ವೇಗಿ ಟಿಮ್​ ಸೌಥಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಬೌಲರ್​ ಟಿಮ್​ ಸೌಥಿ

2 ಟೆಸ್ಟ್​​ ಪಂದ್ಯಗಳಲ್ಲಿ ಭಾಗಿಯಾಗಿರುವ ಪೃಥ್ವಿ ಶಾ ಹಾಗೂ 9 ಟೆಸ್ಟ್​ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿರುವ ಮಯಾಂಕ್​​ ಅಗರ್​​ವಾಲ್​ ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ತಂಡಕ್ಕೆ ಉತ್ತಮ ಆರಂಭ ನೀಡುವ ಸಾಧ್ಯತೆ ಇದೆ. ಈ ಜೋಡಿ ಬಳಿ ಅನುಭವದ ಕೊರತೆ ಇದೆ. ಆದರೆ ತಂಡಕ್ಕೆ ಉತ್ತಮ ರನ್ ​ಗಳಿಸುವ ಸಾಮರ್ಥ್ಯ ಹೆಚ್ಚಾಗಿದೆ ಎಂದಿದ್ದಾರೆ.

ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಅನುಭವಿ ಆಟಗಾರರಾದ ಶಿಖರ್​ ಧವನ್​, ರೋಹಿತ್​ ಶರ್ಮಾ ತಂಡದಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಪೃಥ್ವಿ ಹಾಗೂ ಮಯಾಂಕ್​ ಅವಕಾಶ ಪಡೆದುಕೊಂಡಿದ್ದಾರೆ.

ಇದೇ ವೇಳೆ ಮೈದಾನದ ಬಗ್ಗೆ ಮಾತನಾಡಿರುವ ಅವರು, ಖಂಡಿತವಾಗಿ ಇಲ್ಲಿನ ಪಿಚ್​​​​ ತವರಿನ ತಂಡಕ್ಕೆ ಸಹಕಾರಿಯಾಗುವ ಸಾಧ್ಯತೆ ಇದೆ. ನಾವು ಜವಾಬ್ದಾರಿಯುತವಾಗಿ ಆಟವಾಡಬೇಕಾಗಿದೆ ಎಂದಿದ್ದಾರೆ.

ABOUT THE AUTHOR

...view details