ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​ಗೆ ಟಿಕೆಟ್​ ಬುಕ್​ ಮಾಡಿದ್ದ ಅಭಿಮಾನಿಗಳಿಗೆ ಐಸಿಸಿ ಸ್ಪಷ್ಟನೆ ಹೀಗಿದೆ.. - ಐಸಿಸಿ

ಸತತ ಎರಡು ಟಿ20 ವಿಶ್ವಕಪ್​ಗಳು 2021 ಹಾಗೂ 2022 ರಲ್ಲೂ, 2023ಕ್ಕೆ ಏಕದಿನ ವಿಶ್ವಕಪ್​ ನಿಗದಿ ಮಾಡಲಾಗಿದೆ. ಎರಡು ಟಿ20 ವಿಶ್ವಕಪ್​ ಆ ವರ್ಷದ ಅಕ್ಟೋಬರ್​-ನವೆಂಬರ್​ ತಿಂಗಳ ಮಧ್ಯೆ ನಡೆಯಲಿದೆ. ಇನ್ನು ಮಾರ್ಚ್​ನಲ್ಲಿನ ಆರಂಭವಾಗಬೇಕಿದ್ದ ಏಕದಿನ ವಿಶ್ವಕಪ್ ​ಕೂಡ ಅಕ್ಟೋಬರ್​ಗೆ ಮುಂದೂಡಲ್ಪಟ್ಟಿದೆ.

ಟಿ20 ವಿಶ್ವಕಪ್
ಟಿ20 ವಿಶ್ವಕಪ್

By

Published : Jul 21, 2020, 5:08 PM IST

ದುಬೈ: 2020ರ ಟಿ20 ವಿಶ್ವಕಪ್​ಗೆ ಅಭಿಮಾನಿಗಳು ಈಗಾಗಲೇ ಟಿಕೆಟ್‌ಗಳನ್ನು​ ಬುಕ್​ ಮಾಡಿದ್ದಾರೆ. ಒಂದು ವೇಳೆ 2021ರ ವಿಶ್ವಕಪ್​ ಆಯೋಜನೆಯ ಹಕ್ಕನ್ನು ಆಸ್ಟ್ರೇಲಿಯವೇ ಪಡೆದರೆ ಅದೇ ಟಿಕೆಟ್​ಗಳನ್ನು ಮಾನ್ಯ ಮಾಡಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ವಿಶ್ವಕಪ್​ ಟೂರ್ನಿಯನ್ನು ಸೋಮವಾರ ಐಸಿಸಿ ಮುಂದೂಡಿದೆ. ಆದರೆ ಈ ವಿಶ್ವಕಪ್​ಗಾಗಿ ಲಕ್ಷಾಂತರ ಅಭಿಮಾನಿಗಳು ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡಿಕೊಂಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಐಸಿಸಿ, 2021 ರ ವಿಶ್ವಕಪ್‌ನ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಂಡರೆ, ಬುಕ್​ ಆಗಿರುವ ಟಿಕೆಟ್​ಗಳನ್ನು ಮಾನ್ಯ ಮಾಡಲಾಗುವುದು. ಮತ್ತು ಒಂದು ವೇಳೆ 2022ರ ವಿಶ್ವಕಪ್​ ಆತಿಥ್ಯವನ್ನು ವಹಿಸಿಕೊಂಡರೆ ಟಿಕೆಟ್​ ಮೊತ್ತವನ್ನು ಮರಳಿಸುವುದಾಗಿ ತಿಳಿಸಿದೆ.​

ಸತತ ಎರಡು ಟಿ20 ವಿಶ್ವಕಪ್​ಗಳು 2021 ಹಾಗೂ 2022 ರಲ್ಲೂ, 2023ಕ್ಕೆ ಏಕದಿನ ವಿಶ್ವಕಪ್​ ನಿಗದಿ ಮಾಡಲಾಗಿದೆ. ಎರಡು ಟಿ20 ವಿಶ್ವಕಪ್​ ಆ ವರ್ಷದ ಅಕ್ಟೋಬರ್​-ನವೆಂಬರ್​ ತಿಂಗಳ ಮಧ್ಯೆ ನಡೆಯಲಿದೆ. ಇನ್ನು ಮಾರ್ಚ್​ನಲ್ಲಿ ಆರಂಭವಾಗಬೇಕಿದ್ದ ಏಕದಿನ ವಿಶ್ವಕಪ್​ಕೂಡ ಅಕ್ಟೋಬರ್​ಗೆ ಮುಂದೂಡಲ್ಪಟ್ಟಿದೆ.

2021ರ ವಿಶ್ವಕಪ್​ ಆತಿಥ್ಯ ಈಗಾಗಲೇ ಭಾರತಕ್ಕೆ ನೀಡಲಾಗಿದೆ. ಆದರೆ ಇದರ ಬಗ್ಗೆ ಐಸಿಸಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಒಂದು ವೇಳೆ ಆಸ್ಟ್ರೇಲಿಯಾ 2021ರ ವಿಶ್ವಕಪ್​ ಆಯೋಜಿಸಿದರೆ ಈಗಾಗಲೇ ಬುಕ್​ ಆಗಿರುವ ಟಿಕೆಟ್​ಗಳು ಸ್ವಯಂಚಾಲಿತವಾಗಿ ಹೊಸ ದಿನಾಂಕಗಳಿಗೆ ಅಪ್​ಡೇಟ್​ ಆಗಲಿವೆ ಎಂದು ಐಸಿಸಿ ವೆಬ್​ಸೈಟ್‌ಗೆ ತಿಳಿಸಿದೆ.

ಆಸ್ಟ್ರೇಲಿಯಾಕ್ಕೆ 2022 ಆತಿಥ್ಯವಹಿಸಬೇಕಾಗಿ ಬಂದರೆ ಅಭಿಮಾನಿಗಳು ಡಿಸೆಂಬರ್​ 15ರವರೆಗೆ ರೀಫಂಡ್​ ಮನವಿಯನ್ನು ಸಲ್ಲಿಸಬಹುದಾಗಿದೆ ಎಂದು ಐಸಿಸಿ ಹೇಳಿದೆ.

ABOUT THE AUTHOR

...view details