ಕ್ರೈಸ್ಟ್ಚರ್ಚ್:ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡದಲ್ಲಿ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತ ಆಟಗಾರರ ಸಂಖ್ಯೆ 10ಕ್ಕೇರಿದೆ. ಇನ್ನು ಸರಣಿಗೂ ಮುನ್ನ ಒಂದು ಪರೀಕ್ಷೆ ಮಾತ್ರ ಬಾಕಿ ಉಳಿದಿದ್ದು, ಭಾನುವಾರ ನಡೆಯಲಿದೆ.
ನ್ಯೂಜಿಲ್ಯಾಂಡ್ ಆರೋಗ್ಯ ಸಚಿವಾಲಯ ಕ್ವಾರಂಟೈನ್ನಲ್ಲಿದ್ದ ಆಟಗಾರರಿಗೆ ಹೇಗೆ ಸೋಂಕು ಹರಿಡಿದೆ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಅಷ್ಟರಲ್ಲಾಗಲೇ ಮತ್ತೆ ಮೂವರಿಗೆ ಕೋವಿಡ್ ದೃಢಪಟ್ಟಿರುವುದು ಸರಣಿ ನಡೆಯುವುದರ ಮೇಲೆ ಪರಿಣಾಮ ಬೀರಿದೆ.