ಕೋಲ್ಕತ್ತಾ: ಬೆಂಗಾಲ್ ಟಿ-20 ಚಾಲೆಂಚ್ ಟೂರ್ನಿಗೆ ಕೊರೊನಾ ಕರಿ ನೆರಳು ಬಿದ್ದಂತಾಗಿದೆ. ಮೂವರು ಕ್ರಿಕೆಟ್ ಆಟಗಾರರು ಸೇರಿ ಪೂರ್ವ ಬೆಂಗಾಲ್ ಹಾಗೂ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ನ ಅಭಿಷೇಕ್ ರಾಮನ್ ಮತ್ತು ಹೃತಿಕ್ ಚಟರ್ಜಿಗೆ ಕೋವಿಡ್ ದೃಢಪಟ್ಟಿದೆ.
ಬೆಂಗಾಲ್ ಟಿ -20 ಚಾಲೆಂಜ್ ಟೂರ್ನಿಯ ಮೂವರು ಆಟಗಾರರಿಗೆ ಕೋವಿಡ್ ಪಾಸಿಟಿವ್ - ಪೂರ್ವ ಬೆಂಗಾಲ್ ಹಾಗೂ ಮೋಹನ್ ಬಗಾನ್
ಕೋಲ್ಕತ್ತಾದಲ್ಲಿ ನಡೆಯಲಿರುವ ಬೆಂಗಾಲ್ ಟಿ -20 ಚಾಲೆಂಜ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಮೂವರು ಆಟಗಾರರಿಗೆ ಕೊರೊನಾ ದೃಢವಾಗಿದೆ. ಅಲ್ಲದೇ ಫುಟ್ಬಾಲ್ ಕ್ಲಬ್ನ ಇಬ್ಬರಿಗೂ ಕೊರೊನಾ ದೃಢವಾಗಿದೆ.
ಬೆಂಗಾಲ್ ಟಿ-20 ಚಾಲೆಂಜ್ ಟೂರ್ನಿಯ ಮೂವರು ಆಟಗಾರರಿಗೆ ಕೋವಿಡ್ ಪಾಸಿಟಿವ್
ಇವರಷ್ಟೇ ಅಲ್ಲದೆ ಕೋಲ್ಕತ್ತಾ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿ ಪಾರ್ಥ ಪ್ರತಿಮ್ಗೆ ಸಹ ಕೊರೊನಾ ದೃಢಪಟ್ಟಿದೆ.
ಬಂಗಾಳದ ಮೋಹನ್ ಬಗಾನ್ ಕ್ಲಬ್ ಸೇರಿದಂತೆ 6 ಕ್ಲಬ್ಗಳು ನವೆಂಬರ್ 24ರಿಂದ ಡಿಸೆಂಬರ್ 10ರ ವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಐಎಸ್ಎಲ್ ಟೂರ್ನಿಯ ಕೆಲ ಪಂದ್ಯಗಳನ್ನು ಆಡಲಿವೆ.