ಕರ್ನಾಟಕ

karnataka

ETV Bharat / sports

ಈ ಸಲ ಕಪ್ ನಮ್ದೆ.. ನಾವ್​ ಹೇಳಿದ್ದಲ್ಲ ಡೇಲ್ ಸ್ಟೈನ್​ ನೀಡಿದ ಸಂದೇಶ ಇದು! - ಆರ್​ಸಿಬಿ ಅಭಿಮಾನಿಗಳಿಗೆ ಡೇಲ್ ಸ್ಟೇನ್ ಭರವಸೆ

ಮತ್ತೆ ಬೆಂಗಳೂರು ತಂಡ ಕೂಡಿಕೊಂಡಿರುವ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೈನ್, ಆರ್​ಸಿಬಿ ಅಭಿಮಾನಿಗಳಿಗೆ ಪಾಸಿಟಿವ್ ಸಂದೇಶವೊಂದನ್ನ ನೀಡಿದ್ದಾರೆ.

ಆರ್​ಸಿಬಿ ಅಭಿಮಾನಿಗಳಿಗೆ ಡೇಲ್ ಸ್ಟೇನ್ ಭರವಸೆ, Dale Steyn sends positive Message to RCB fans
ಡೇಲ್ ಸ್ಟೈನ್

By

Published : Dec 21, 2019, 8:56 PM IST

ಹೈದರಾಬಾದ್: ಪ್ರತಿ ಬಾರಿಯೂ ಕಪ್​ ಗೆಲ್ಲುವ ಫೇವರಿಟ್ ತಂಡವಾಗಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಐಪಿಎಲ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಂದು ಬಾರಿಯೂ ಕಪ್‌ಗೆ ಮುತ್ತಿಡಲು ಸಾಧ್ಯವಾಗಿಲ್ಲ.

2020ರ ಇಂಡಿಯನ್ ಪ್ರೀಮಿಯರ್​ ಲೀಗ್​ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರ್​ಸಿಬಿ ತಂಡವನ್ನ ಮತ್ತೆ ಕೂಡಿಕೊಂಡಿರುವ ದಕ್ಷಿಣ ಆಫ್ರಿಕಾ ವೇಗಿ ಡೇಲ್​ ಸ್ಟೈನ್​ ಅಭಿಮಾನಿಗಳಿಗೆ ಕಪ್​ ಗೆಲ್ಲುವ ಭರವಸೆ ನೀಡಿದ್ದಾರೆ.

ಬಿಡುವಿನ ಸಮಯದಲ್ಲಿ ಟ್ವಿಟ್ಟರ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸೋದಾಗಿ ಸ್ಟೈನ್​ ಹೇಳಿದ್ದರು. ಹೀಗಾಗಿ ಟ್ವಿಟ್ಟರ್​ನಲ್ಲಿ ಫ್ಯಾನ್ಸ್,​ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಅದರಲ್ಲಿ ಕ್ರೀಡಾ ವೆಬ್​ಸೈಟ್​ವೊಂದು 2008, 2019ರ ನಂತರ ಮತ್ತೆ ಆರ್​ಸಿಬಿ ತಂಡ ಸೇರಿಕೊಂಡಿರುವ ನಿಮ್ಮಿಂದ ಏನನ್ನ ನಿರೀಕ್ಷಿಸಬಹುದು ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಟೈನ್,​ ಕಪ್​ ಎಮೋಜಿ ಹಾಕುವ ಮೂಲಕ ಈ ಸಲ ಕಪ್​ ನಮ್ದೆ ಎಂದು ಅಭಯ ನೀಡಿದ್ದಾರೆ.

ಸ್ಟೈನ್​ರನ್ನ ಆರ್​ಸಿಬಿ ತಂಡ ಖರೀದಿಸಿದಾಗಲೇ ಅಭಿಮಾನಿಗಳೆಲ್ಲ ಈ ಸಲ ಕಪ್​ ನಮ್ದೆ ಎಂದು ಹಿಗ್ಗಿದ್ದರು. ಇದೀಗ ಸ್ವತಃ ಸ್ಟೈನ್​ ಇಂತಾದ್ದೊಂದು ಸಂದೇಶ ನೀಡಿರುವುದು ಅರ್​ಸಿಬಿ ಅಭಿಮಾನಿಗಳ ಹರ್ಷವನ್ನ ಇಮ್ಮಡಿಗೊಳಿಸದೆ. ಇನ್ನು ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಬ್ಯಾಟ್ಸ್​​ಮನ್​ ಯಾರು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಸ್ಟೈನ್​ ಅವರು ಕ್ವಿಂಟನ್​ ಡಿ ಕಾಕ್, ಎಬಿ ಡಿ ವಿಲಿಯರ್ಸ್​ ಮತ್ತು ವಿರಾಟ್​ ಕೊಹ್ಲಿ ಎಂದು ತಿಳಿಸಿದ್ದಾರೆ.

2008ರ ಐಪಿಎಲ್​ನಲ್ಲಿ ಸ್ಟೈನ್​ ಬೆಂಗಳೂರು ತಂಡದಲ್ಲಿದ್ದರು. ನಂತರ 2019ರ ಐಪಿಎಲ್​ ಸಮಯದಲ್ಲಿ ನಾಥನ್ ಕೌಲ್ಟರ್​ ನೈಲ್ ಬದಲಿಗೆ ಮತ್ತೆ ಆರ್​ಸಿಬಿ ತಂಡ ಸೇರಿಕೊಂಡಿದ್ದರು. ಆದ್ರೆ ಆರ್​ಸಿಬಿ ತಂಡ ಸ್ಟೈನ್​ರನ್ನ ತಂಡದಿಂದ ಕೈಬಿಟ್ಟಿತ್ತು. ಇದೀಗ ಬೆಂಗಳೂರು ತಂಡ ಮಗದೊಮ್ಮೆ ಸ್ಟೈನ್​ರನ್ನ ಖರೀದಿಸಿದ್ದರಿಂದ 2020ರ ಐಪಿಎಲ್​ನಲ್ಲಿ ಬೆಂಗಳೂರು ತಂಡದ ಪರ ಕಣಕ್ಕಿಳಿಯಲಿದ್ದಾರೆ.

ABOUT THE AUTHOR

...view details