ಹೈದರಾಬಾದ್:ಟೀಂ ಇಂಡಿಯಾ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 15ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅರ್ಧಶತಕ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್ ಬರೆದು ಇಂದಿಗೆ ಬರೋಬ್ಬರಿ 1 ವರ್ಷವಾಗಿದೆ.
ಶಫಾಲಿ ಈ ದಾಖಲೆಗೆ ಒಂದು ವರ್ಷ: 15ನೇ ವರ್ಷದಲ್ಲಿ ನಿರ್ಮಿಸಿದ್ದ ಆ ರೆಕಾರ್ಡ್ ಯಾವುದು!?
ಟೀಂ ಇಂಡಿಯಾ ಮಹಿಳಾ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಇದೀಗ 1 ವರ್ಷವಾಗಿದ್ದು, ಈ ಮೂಲಕ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಕೂಡ ಬ್ರೇಕ್ ಮಾಡಿದ್ದರು.
ಇಷ್ಟೊಂದು ಕಡಿಮೆ ವಯಸ್ಸಿನಲ್ಲಿ ಟೀಂ ಇಂಡಿಯಾ ಪರ ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಕ್ರಿಕೆಟರ್ ಎಂಬ ಹಿರಿಮೆಗೆ ಶಫಾಲಿ ದಾಖಲಾಗಿದ್ದರು. ಜತೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿ ದಾಖಲಾಗಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟಿ-20 ಪಂದ್ಯದಲ್ಲಿ ಶಪಾಲಿ ಅರ್ಧಶತಕ ಗಳಿಕೆ ಮಾಡಿದ್ದರು. ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 73ರನ್ಗಳಿಕೆ ಮಾಡಿ ಚೊಚ್ಚಲ ಅರ್ಧಶತಕ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಹಾಗೂ ಶಫಾಲಿ 143ರನ್ಗಳ ಜೊತೆಯಾಟವಾಡಿದ್ದರು.16 ವರ್ಷದ ಶಫಾಲಿ ವರ್ಮಾ ಇಲ್ಲಿಯವರೆಗೆ 19 ಟಿ-20 ಪಂದ್ಯಗಳನ್ನಾಡಿದ್ದು, 487ರನ್ಗಳಿಕೆ ಮಾಡಿದ್ದಾರೆ.