ಕರ್ನಾಟಕ

karnataka

ETV Bharat / sports

ಮೂರು ವರ್ಷದ ನೆನಪು: ಅಂದು ಶ್ರೀಲಂಕಾ ವಿರುದ್ಧ ಹಿಟ್​ ಮ್ಯಾನ್​ ರೋಹಿತ್​ ಅಬ್ಬರ ಹೇಗಿತ್ತು ಗೊತ್ತಾ?

2017 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ತಮ್ಮ ಮೂರನೇ ಡಬಲ್ ಸೆಂಚುರಿ ಬಾರಿಸಿದ್ದರು. ಈ ಪಂದ್ಯದಲ್ಲಿ ರೋಹಿತ್​ 13 ಬೌಂಡರಿ, 12 ಸಿಕ್ಸರ್ ಸಮೇತ 208 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ 141 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

Rohit Sharma
ರೋಹಿತ್​ ಶರ್ಮಾ

By

Published : Dec 13, 2020, 1:07 PM IST

ಹೈದರಾಬಾದ್:ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಟೀಂ​ ಇಂಡಿಯಾದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಇವರು ಏಕದಿನ ಹಾಗು ಟಿ-20 ಕ್ರಿಕೆಟ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಏಕದಿನ ಕ್ರಿಕೆಟ್​​ನಲ್ಲಿ 3 ಡಬಲ್​​ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಆಟಗಾರ ಕೂಡಾ ಹೌದು.

ಶ್ರೀಲಂಕಾ ವಿರುದ್ಧ ಮೂರನೇ ಡಬಲ್​​ ಸೆಂಚುರಿ ಸಿಡಿಸಿದ್ದ ಹಿಟ್​ಮ್ಯಾನ್​

2017 ರ ಡಿಸೆಂಬರ್ 13 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ತಮ್ಮ ಮೂರನೇ ಡಬಲ್ ಸೆಂಚುರಿ ಬಾರಿಸಿದ್ದರು. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ 13 ಬೌಂಡರಿ, 12 ಸಿಕ್ಸರ್ ಸಮೇತ 208 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ 141 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

ಓದಿ :ಪ್ರಾಯೋಗಿಕವಾಗಿ ರೋಹಿತ್ ಫಿಟ್: ಕಣಕ್ಕಿಳಿಯುವ ಮುನ್ನ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕು ಎಂದ ಬಿಸಿಸಿಐ

ಲಂಕಾ ವಿರುದ್ಧವೇ ಎರಡು ಬಾರಿ ಡಬಲ್​ ಸೆಂಚುರಿ ಸಿಡಿಸಿರುವ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಒಂದು ಡಬಲ್ ಸೆಂಚುರಿ ಗಳಿಸಿದ್ದಾರೆ. ಏಕದಿನ ಇತಿಹಾಸದಲ್ಲಿ ಮೂರು ಡಬಲ್ ಸೆಂಚುರಿಗಳನ್ನು ಹೊಡೆದ ಏಕೈಕ ಬ್ಯಾಟ್ಸ್‌ಮನ್ ಇವರು.

ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ.

ABOUT THE AUTHOR

...view details