ಹೈದರಾಬಾದ್:ಭಾರತ ತಂಡ ಸ್ಫೋಟಕ ದಾಂಡಿಗ ರೋಹಿತ್ ಶರ್ಮಾ ಟಿ-20 ಕ್ರಿಕೆಟ್ನಲ್ಲಿ ವಿಶ್ವದಾಖಲೆಯ ವೇಗದ ಶತಕ ಸಿಡಿಸಿ ಇಂದಿಗೆ 3 ವರ್ಷಗಳ ತುಂಬಿದೆ. ಡಿಸೆಂಬರ್ 22 2017ರಲ್ಲಿ ರೋಹಿತ್ ಶ್ರೀಲಂಕಾ ವಿರುದ್ಧ ವೇಗದ ಶತಕ ಸಿಡಿಸಿ ಡೇವಿಡ್ ಮಿಲ್ಲರ್ ಜೊತೆ ವಿಶ್ವದಾಖಲೆಯನ್ನು ಹಂಚಿಕೊಂಡಿದ್ದರು.
ಲಂಕಾ ವಿರುದ್ಧ ಇಂದೋರ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಕೇವಲ 35 ಎಸೆತಗಳಲ್ಲಿ ಮೂರಂಕಿ ದಾಟಿದ್ದರು. ರೋಹಿತ್ ಆ ಪಂದ್ಯದಲ್ಲಿ 43 ಎಸೆತಗಳಲ್ಲಿ 118 ರನ್ ಚಚ್ಚಿದ್ದರು. ಅವರ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 10 ಭರ್ಜರಿ ಸಿಕ್ಸರ್ ಒಳಗೊಂಡಿತ್ತು. ಇದು ಟಿ-20 ಕ್ರಿಕೆಟ್ನಲ್ಲಿನ ವೇಗದ ಶತಕವಾಗಿತ್ತು.
ಇದನ್ನು ಓದಿ: 'ಪೃಥ್ವಿ ಶಾ ಮೇಲೆ ನಂಬಿಕೆಯಿಟ್ಟು ಭಾರತ ಆಡಳಿತ ಮಂಡಳಿ ಮತ್ತೊಂದು ಅವಕಾಶ ನೀಡಲಿ'
ರೋಹಿತ್ಗೂ ಮೊದಲು, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 2017 ನವೆಂಬರ್ 29 ರಲ್ಲಿ ಬಾಂಗ್ಲಾದೇಶದ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದರು.
ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೂಡ 49 ಎಸೆತಗಳಲ್ಲಿ 89ರನ್ ಸಿಡಿಸಿ ಭಾರತ ತಂಡ 260/5 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಶ್ರೀಲಂಕಾ 172 ಕ್ಕೆ ಆಲೌಟ್ ಆಗುವ ಮೂಲಕ 88 ರನ್ಗಳ ಸೋಲು ಕಂಡಿತ್ತು.
ರೋಹಿತ್ ಶರ್ಮಾ ವಿಶ್ವದಾಖಲೆಯ ಶತಕ
ಸೀಮಿತ ಓವರ್ಗಳ ಭಾರತ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು 108 ಪಂದ್ಯಗಳಲ್ಲಿ 2773 ರನ್ಗಳಿಸಿದ್ದಾರೆ. ಅವರು 4 ಶತಕ ಕೂಡ ಸಿಡಿಸಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 85 ಪಂದ್ಯಗಳಲ್ಲಿ 2928 ರನ್ಗಳಿಸಿದ್ದಾರೆ.