ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಮೊದಲ ಶತಕ ಸಿಡಿಸಿ ಇಂದಿಗೆ ಬರೋಬ್ಬರಿ 10 ವರ್ಷ ತುಂಬಿದೆ.
ಅಂಡರ್ 19 ವಿಶ್ವಕಪ್ ಗೆದ್ದ ಒಂದು ವರ್ಷದಲ್ಲಿ ಸೀನಿಯರ್ ಟೀಮ್ ಸೇರಿಕೊಂಡ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯ ತೋರಿದ್ದು 2009 ಡಿಸೆಂಬರ್ 24 ರಂದು ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ. ಆ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕದ ಮೂಲಕ ತಮ್ಮ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ್ದರು.
ಅಂದು ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ಉಪುಲ್ ತರಂಗ(118) ಅವರ ಶತಕದ ನೆರವಿನಿಂದ 315 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ 23 ರನ್ಗಳಾಗುವಷ್ಟರಲ್ಲಿ ಸಚಿನ್ ಹಾಗೂ ತೆಂಡೂಲ್ಕರ್ ವಿಕೆಟ್ ಕಳೆದುಕೊಂಡಿತ್ತು. ಆದರೆ ಗಂಭೀರ್ ಜೊತೆ ಸೇರಿಕೊಂಡ ಕೊಹ್ಲಿ 224 ರನ್ಗಳ ಜೊತೆಯಾಟ ನಡೆಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.