ಹೈದರಾಬಾದ್: ಕ್ರೀಡಾ ಜಗತ್ತಿನಲ್ಲಿ ಮಂಕು ಕವಿಯುತ್ತಿದ್ದ ಕ್ರಿಕೆಟ್ಗೆ ಹೊಸ ಚೈತನ್ಯ ತಂದುಕೊಟ್ಟ ಟಿ -20 ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರಂಭವಾಗಿ ಇಂದಿಗೆ 16 ವರ್ಷ ಕಳೆದಿದೆ.
ಫೆಬ್ರವರಿ 17, 2005 ರಲ್ಲಿ ಕ್ರಿಕೆಟ್ ಇತಿಹಾಸದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಆಕ್ಲೆಂಡ್ನಲ್ಲಿ ಮುಖಾಮುಖಿಯಾಗಿದ್ದವು. ಟಿ-20 ಕ್ರಿಕೆಟ್ ಇಂದು ಪ್ರೇಕ್ಷಕರ ನೆಚ್ಚಿನ ಕ್ರಿಕೆಟ್ ಮಾದರಿಯಾಗಿದ್ದು, ಇದು ಪ್ರಪಂಚದಲ್ಲಿ ಬೆರಳೇಣಿಕೆಯಷ್ಟಿದ್ದ ಕ್ರಿಕೆಟ್ ಆಡುವ ರಾಷ್ಟ್ರಗಳನ್ನು ಇಂದು ನೂರಕ್ಕೂ ಹೆಚ್ಚಾಗುವಂತೆ ಮಾಡಿದೆ. ದಿನವೆಲ್ಲಾ ಸಮಯ ವ್ಯರ್ಥ ಎಂದು ಮೂಗು ಮುರಿಯುತ್ತಿದ್ದ ಜಪಾನ್, ಅಮೆರಿಕ ಮತ್ತು ಚೀನಾದಂತಹ ರಾಷ್ಟ್ರಗಳೇ ಇಂದು ಕ್ರಿಕೆಟ್ ಆಡಲು ಶುರಮಾಡಿವೆಯಂದರೆ, ಅದರ ಸಂಪೂರ್ಣ ಶ್ರೇಯ ಟಿ-20 ಕ್ರಿಕೆಟ್ಗೆ ಸಲ್ಲುತ್ತದೆ.
16 ವರ್ಷಗಳ ಹಿಂದೆ ಈ ದಿನ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿ 214 ರನ್ಗಳಿಸಿತ್ತು. ನಾಯಕ ರಿಕಿ ಪಾಂಟಿಂಗ್ 55 ಎಸೆತಗಳಲ್ಲಿ 5 ಸಿಕ್ಸರ್ಸ್ ಹಾಗೂ 8 ಬೌಂಡರಿಗಳ ನೆರವಿನಿಂದ 98 ರನ್ಗಳಿಸಿದ್ದರು.