ಮುಂಬೈ: ಭಾರತದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 2005ರಲ್ಲಿ ಮುರಿದಿದ್ದ ಸುನಿಲ್ ಗವಾಸ್ಕರ್ ಅವರ ಹೆಚ್ಚು ಶತಕದ ದಾಖಲೆಗೆ ಇಂದಿಗೆ 14 ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೂ ಹೆಚ್ಚು ಟೆಸ್ಟ್ ಶತಕದ ದಾಖಲೆ ಸಚಿನ್ ಹೆಸರಲ್ಲಿ ಮುಂದುವರಿದುಕೊಂಡು ಬಂದಿದೆ.
2005 ಡಿಸೆಂಬರ್ 10 ರಂದು ಸಚಿನ್ ತೆಂಡೂಲ್ಕರ್ ಶ್ರೀಲಂಕಾ ವಿರುದ್ಧ ಡೆಲ್ಲಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತದ ಹಿರಿಯ ಕ್ರಿಕೆಟರ್ ಸುನಿಲ್ ಗವಾಸ್ಕರ್(34ಶತಕ) ಅವರನ್ನು ಹಿಂದಿಕ್ಕಿ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.