ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಶಕಗಳಿಗೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮದೇ ಆದ ದಾಖಲೆಗಳು , ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಕೆಲವು ಲೆಜೆಂಡ್ ಕ್ರಿಕೆಟಿಗರಿಗೆ 2020 ನಿವೃತ್ತಿ ವರ್ಷವಾಗಲಿದೆ.
ಈಗಾಗಲೆ ಕೆಲವು ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಹಿರಿಯ ಕ್ರಿಕೆಟಿಗರು ಟಿ-20 , ಏಕದಿನ ಕ್ರಿಕೆಟ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ 2020ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದಲೂ ದೂರವಾಗಬಹುದಾದ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
ಮಹೇಂದ್ರ ಸಿಂಗ್ ಧೋನಿ
2019ರ ಏಕದಿನ ವಿಶ್ವಕಪ್ನಂತರ ಕ್ರಿಕೆಟ್ನಿಂದ ಅಂತರ ಕಾಯ್ದುಕೊಂಡಿರುವ ಭಾರತ ತಂಡದ ಎಂಎಸ್ ಧೋನಿ 2020ಕ್ಕೆ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಭಾರತಕ್ಕೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಧೋನಿ ಈಗಾಗಲೆ ಆಯ್ಕೆ ಸಮಿತಿ ಧೋನಿಯನ್ನು ಯಾವುದೆ ಟೂರ್ನಿಗೆ ಆಯ್ಕೆ ಮಾಡಿಲ್ಲ. ಮುಂದಿನ ಐಪಿಎಲ್ ಧೋನಿ ನೀಡುವ ಪ್ರದರ್ಶನದ ಮೇಲೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಅಡಗಿದೆ ಎಂದು ಈಗಾಗಲೆ ಮಾಜಿ ಕ್ರಿಕೆಟಿಗರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಧೋನಿ ಮಾತ್ರ ಇದುವರೆಗೆ ನಿವೃತ್ತಿ ಸುಳಿವು ನೀಡಿಲ್ಲ. 38 ವರ್ಷದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷ ಪೂರೈಸಿದ್ದಾರೆ. ಇವರು 350 ಏಕದಿನ, 90 ಟೆಸ್ಟ್ ಹಾಗೂ 98 ಟಿ20 ಪಂದ್ಯಗಳನ್ನಾಡಿದ್ದು 17 ಸಾವಿರ ಅಂತಾರಾಷ್ಟ್ರೀಯ ರನ್ಗಳಿಸಿದ್ದಾರೆ.
ಡೇಲ್ ಸ್ಟೈನ್
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಈಗಾಗಲೇ ನಿವೃತ್ತಿ ಘೋಷಿಸಿರುವ ಡೇಲ್ ಸ್ಟೈನ್ ಟಿ-20 ವಿಶ್ವಕಪ್ ಆಡುವ ಅಭಿಲಾಷೆಯೊಂದಿಗೆ ಕಾಯುತ್ತಿದ್ದಾರೆ. 36 ವರ್ಷದ ಡೇಲ್ ಸ್ಟೈನ್ ಸ್ವತಃ ತಾವೇ ಟಿ-20 ಹಾಗೂ ಏಕದಿನ ಕ್ರಿಕೆಟ್ ಆಡಲು ಸಿದ್ದ ಎಂದು ತಿಳಿಸಿದರೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಆದರೆ, ಮಾರ್ಕ್ ಬೌಷರ್ ಕೋಚ್ ಆದ ಮೇಲೆ ಹಳೆತಲೆಗಳಿಗೆ ಅವಕಾಶ ನೀಡುತ್ತೇನೆ ಎಂದಿರುವುದರಿಂದ ಡೇಲ್ ಸ್ಟೈನ್ ಟಿ-20 ವಿಶ್ವಕಪ್ ನಂತರ ನಿವೃತ್ತಿಯಾಗುವ ಸಾಧ್ಯತೆ ಇದೆ. ಸ್ಟೈನ್ ದಕ್ಷಿಣ ಆಫ್ರಿಕಾ ಪರ 93 ಟೆಸ್ಟ್, 125 ಏಕದಿನ ಹಾಗೂ 44 ಟಿ-20 ಪಂದ್ಯಗಳನ್ನಾಡಿದ್ದಾರೆ.
ಲಸಿತ್ ಮಾಲಿಂಗ