ಸೌತಾಂಪ್ಟನ್:ಶನಿವಾರ ಪಾಕಿಸ್ತಾನದ ವಿರುದ್ಧ ತಮ್ಮ ವೃತ್ತಿ ಜೀವನದ 2ನೇ ಶತಕ ದಾಖಲಿಸಿದ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕಳೆದ ಎರಡು ವಾರಗಳಿಂದ ಸಕಾರಾತ್ಮಕ ದೃಷ್ಟಿಕೋನದಲ್ಲಿ ಆಲೋಚಿಸಲು ಶುರುಮಾಡಿದ್ದರಿಂದ ತಂಡಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಫಲವಾದ ನಂತರ ಜೋಸ್ ಬಟ್ಲರ್ರನ್ನು ತಂಡದಿಂದ ಕೈಬಿಡುವ ಮಾತು ಕೇಳಿಬಂದಿದ್ದವು. ಆದೇ ಆಲೋಚನೆ ಕೂಡ ಬಟ್ಲರ್ರಲ್ಲೂ ಮೂಡಿತ್ತು. ಆದರೆ ಮೊದಲ ಟೆಸ್ಟ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿದ್ದರು.
ಒಂದೆರಡು ಪಂದ್ಯಗಳ ಹಿಂದೆ ನನ್ನನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದು ನಾನು ಆಲೋಚಿಸುತ್ತಿದ್ದೆ. ಖಂಡಿತವಾಗಿಯೂ ಕೆಲವು ವಾರಗಳಿಂದ ನನ್ನನ್ನು ನಾನೆ ಪ್ರಶ್ನೆ ಮಾಡಿಕೊಂಡಿದ್ದೆ. ನನ್ನಲ್ಲಿದ್ದ ಅಳುಕು ಮನೋಭಾವೆನಯನ್ನು ಹೋಗಲಾಡಿಸಲು ಉತ್ತಮವಾದ ದಾರಿ ಕಂಡುಕೊಂಡೆ. ಈ ಸಂದರ್ಭದಲ್ಲಿ ನಿಮ್ಮ ಮೇಲಿನ ನಂಬಿಕೆಯನ್ನು ನೀವು ಉಳಿಸಿಕೊಂಡಾಗ, ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೆಚ್ಚು ದೂರ ಶ್ರಮಿಸಬೇಕಾಗಿಲ್ಲ ಎಂದು ಬಟ್ಲರ್ ಶತಕ ಸಿಡಿಸಿದ ನಂತರ ತಿಳಿಸಿದ್ದಾರೆ.