ಕರ್ನಾಟಕ

karnataka

ETV Bharat / sports

ದ.ಆಫ್ರಿಕಾ ಪರ ಡಿಕಾಕ್​ ಇನ್ನೂ 100 ಟೆಸ್ಟ್​ ಪಂದ್ಯಗಳನ್ನಾಡಿ ನನ್ನ ದಾಖಲೆ ಮುರಿಯಬಲ್ಲರು: ಮಾರ್ಕ್​ ಬೌಷರ್​ - ಕ್ರಿಕೆಟ್ ದಕ್ಷಿಣ ಆಫ್ರಿಕಾ

ಡಿಕಾಕ್​ ಇಂದು ಪಾಕಿಸ್ತಾನ ವಿರುದ್ಧ ತಮ್ಮ 50ನೇ ಟೆಸ್ಟ್​ ಪಂದ್ಯವನ್ನಾಡುತ್ತಿದ್ದಾರೆ. ​ಹರಿಣಗಳ ಪರ ವಿಕೆಟ್​ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಬೌಷರ್​ 1997ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, ಅವರು ದೇಶದ ಪರ 150 ಪಂದ್ಯಗಳಲ್ಲಿ ಪ್ರತಿನಿಧಿಸಿದ ದಾಖಲೆ ಹೊಂದಿದ್ದಾರೆ.

ಕ್ವಿಂಟನ್ ಡಿಕಾಕ್​
ಕ್ವಿಂಟನ್ ಡಿಕಾಕ್​

By

Published : Jan 26, 2021, 6:44 PM IST

ಕರಾಚಿ: ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್​ ಡಿಕಾಕ್ ಮುಂದೊಂದು ದಿನ ಹರಿಣಗಳ ಪರ ಅತಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನಾಡಿದ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ ಎಂದು ಕೋಚ್​ ಮಾರ್ಕ್​ ಬೌಷರ್​ ಅಭಿಪ್ರಾಯಪಟ್ಟಿದ್ದಾರೆ.

ಡಿಕಾಕ್​ ಇಂದು ಪಾಕಿಸ್ತಾನ ವಿರುದ್ಧ ತಮ್ಮ 50ನೇ ಟೆಸ್ಟ್​ ಪಂದ್ಯವನ್ನಾಡುತ್ತಿದ್ದಾರೆ. ​ಹರಿಣಗಳ ಪರ ವಿಕೆಟ್​ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಬೌಷರ್​ 1997ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, ಅವರು ದೇಶದ ಪರ 150 ಪಂದ್ಯಗಳಲ್ಲಿ ಪ್ರತಿನಿಧಿಸಿದ ದಾಖಲೆ ಹೊಂದಿದ್ದಾರೆ.

"ಇದು ಯಾವುದೇ ಆಟಗಾರನಿಹಾದರೂ ವಿಶೇಷ ಸಂದರ್ಭವಾಗಿರುತ್ತದೆ. ಅವರ(ಡಿಕಾಕ್​) ವೃತ್ತಿ ಜೀವನ ಈಗಷ್ಟೇ ಶುರುವಾಗಿದೆ. ಅವರು ಇನ್ನೂ 100 ಟೆಸ್ಟ್​ ಪಂದ್ಯಗಳನ್ನಾಡುವ ಅವಕಾಶವಿದೆ" ಎಂದು ಬೌಷರ್​ ಕ್ರೀಡಾ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಾರ್ಕ್​ ಬೌಷರ್​

ಡಿಕಾಕ್ ಒಬ್ಬ ವಿಶೇಷ ಆಟಗಾರರಾಗಿದ್ದಾರೆ. ಅವರು ಈಗ ಫಾರ್ಮ್​ನಲ್ಲಿಲ್ಲದೇ ಇರುಬಹುದು. ಆದರೆ ಎದುರಾಳಿಗಳು ಇವರು ಫಾರ್ಮ್​ ಕಂಡುಕೊಳ್ಳಬಾರದು ಎಂಬುದನ್ನೇ ನೋಡುತ್ತಿರುತ್ತಾರೆ. ಏಕೆಂದರೆ ಅವರು ಬೇರೆ ಯಾವುದೇ ಆಟಗಾರನಿಗಿಂತ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ದ. ಆಫ್ರಿಕಾ ಮುಖ್ಯ ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಬೌಷರ್​ 150 ಟೆಸ್ಟ್​ ಪಂದ್ಯಗಳನ್ನಾಡಿದ್ದರೆ, ಆಲ್​ರೌಂಡರ್​ ಜಾಕ್​ ಕಾಲೀಸ್​ 166 ಟೆಸ್ಟ್​ ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ.

ಇದನ್ನು ಓದಿ:ಮೊದಲ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾ 220ಕ್ಕೆ ಆಲೌಟ್​: 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕ್​

ABOUT THE AUTHOR

...view details