ಚೆನ್ನೈ:ಐಪಿಎಲ್ನ ಅತ್ಯಂತ ಯಶಸ್ವಿ ಪ್ರಾಂಚೈಸಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಜಾಲಾತಾಣದಲ್ಲಿ ಮಂಗಳವಾರ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಧೋನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
13ನೇ ಐಪಿಎಲ್ ಆವೃತ್ತಿಯಲ್ಲಿ ಧೋನಿ ಸಿಎಸ್ಕೆ ತಂಡವನ್ನು ಮುನ್ನಡೆಬೇಕಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಭೀತಿಯಿಂಧ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ಧಾಷ್ಟವಧಿಗೆ ಮುಂದೂಡಿದೆ.
ಬಿಡುವಿನ ಸಂದರ್ಭದಲ್ಲಿ ಸಿಎಸ್ಕೆ ಪ್ರಾಂಚೈಸಿ ತನ್ನ ಹಾಲಿ ಹಾಗೂ ಮಾಜಿ ಆಟಗಾರರ ಜೊತೆ ಸಂವಾದ ನಡೆಸುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದೆ. ಈಗಾಗಲೆ ಮ್ಯಾಥ್ಯೂ ಹೇಡನ್, ಮೈಕ್ ಹಸ್ಸಿ ಸೇರಿದಂತೆ ಹಲವಾರು ಮಾಜಿ ಲೆಜೆಂಡ್ಗಳ ಜೊತೆ ಸಂವಾದ ನಡೆಸಿದೆ.
ಮಂಗಳವಾರ ನಾಯಕ ಎಂಸ್ ಧೋನಿ ಬಸ್ ಏರಲು ಬರುತ್ತಿರುವ ಸಂದರ್ಭದ ವಿಡಿಯೋವೊಂದನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಯೋದಲ್ಲಿ ಧೋನಿ ಬಾಗಿಲ ಬಳಿ ಬಂದ ಕೂಡಲೆ ಸೆಕ್ಯುರಿಟಿ ಸಿಬ್ಬಂದಿ ಸೆಲ್ಯೂಟ್ ಮೂಲಕ ಗೌರವಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಧೋನಿ ಸ್ಮೈಲ್ ನೀಡಿ ಮುಂದೆ ಸಾಗಿದ್ದಾರೆ.