ಮೆಲ್ಬೋರ್ನ್: 2020ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಜರ್ನಿ ಕುರಿತ ಸಾಕ್ಷ್ಯಚಿತ್ರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಮಾಣ ಮಾಡಿದ್ದು, ಸೋಮವಾರ ಟ್ರೈಲರ್ ಬಿಡುಗಡೆ ಮಾಡಿದೆ.
ಕೋವಿಡ್ -19 ವಿಶ್ವ ಕ್ರೀಡೆಗಳು ಅಮಾನತಾಗುವ ಒಂದು ವಾರದ ಮೊದಲು, ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ 'ದಿ ರೆಕಾರ್ಡ್' ಸಾಕ್ಷ್ಯಚಿತ್ರವನ್ನು ತಯಾರಿಸಿದೆ. ಇದು 2020 ರ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪಯಣದ ಕಥೆಯನ್ನು ವಿವರಿಸಲಿದೆ.
ವಿಶ್ವ ಮಹಿಳಾ ದಿನಾಚರಣೆಯ ದಿನ ತುಂಬಿದ ಎಂಸಿಜಿ ಮೈದಾನದದಲ್ಲಿ ಪುರುಷರ ಪಂದ್ಯಕ್ಕೆ ಸಮಾನವಾಗಿ ನಡದಿದ್ದ ಫೈನಲ್ ಪಂದ್ಯದ ಕುರಿತ ಮಾಹಿತಿ ಜೊತೆಗೆ ಟೂರ್ನಿಯ ಕೆಲವು ಕೂತೂಹಲಕಾರಿ ಘಟನೆಗಳ ಬಗ್ಗೆ ಮಾಹಿತಿ ಇರಲಿದೆ.
ದಿ ರೆಕಾರ್ಡ್ ಸಾಕ್ಷ್ಯ ಚಿತ್ರದಲ್ಲಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್, ಆಸ್ಟ್ರೇಲಿಯಾದ ಉಪನಾಯಕಿ, ರಾಚೆಲ್ ಹೇನ್ಸ್, ಮುಖ್ಯ ತರಬೇತುದಾರ ಮ್ಯಾಥ್ಯೂ ಮೋಟ್, ಟೂರ್ನಿ ಶ್ರೇಷ್ಠ ಆಟಗಾರ್ತಿ ಮೇಗನ್ ಶುಟ್ ಹಾಗೂ ವಿಕೆಟ್ ಕೀಪರ್ ಅಲಿಸಾ ಹೀಲಿ, ಆಲ್ರೌಂಡರ್ ಎಲಿಸ್ ಪೆರ್ರಿ, ಮೊಲಿ ಸ್ಟ್ರೇನೋ, ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ದಕ್ಷಿಣ ಆಫ್ರಿಕಾದ ನಾಯಕಿ ಡ್ಯಾನ್ ವಾನ್ ನೀಕರ್ಕ್ ಹಾಗೂ ಥಾಯ್ಲೆಂಡ್ ನಾಯಕಿ ಸೊರ್ನಾರಿನ್ ಟಿಪ್ಪೋಚ್ ಕಾಣಿಸಿಕೊಳ್ಳಲಿದ್ದಾರೆ.
ಈ ಸಾಕ್ಷ್ಯ ಚಿತ್ರ ಅಮೇಜಾನ್ ಪ್ರೈಮ್ನಲ್ಲಿ ಇದೇ ಶುಕ್ರವಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಸ್, ಕೆನಡಾ, ಇಂಗ್ಲೆಂಡ್, ಐರ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ನೇಪಾಳ, ಟ್ರಿನಿಡಾಡ್ ಮತ್ತು ಟೊಬಾಗೊ, ಬಹಾಮಾಸ್, ಬಾರ್ಬಡೋಸ್, ಬರ್ಮುಡಾ, ಗಯಾನಾ, ಗ್ರೆನಡಾ, ಸೌದಿ ಅರೇಬಿಯಾ, ಸಿಂಗಾಪುರ್, ಫಿಜಿ, ಜಮೈಕಾ, ಪಪುವಾ ನ್ಯೂಗಿನಿಯಾ, ಜಿಂಬಾಬ್ವೆ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಪ್ರಸಾರವಾಗಲಿದೆ.