ಕರ್ನಾಟಕ

karnataka

ETV Bharat / sports

ವಿಶ್ವಕ್ಕೆ ನಮ್ಮ ಶಕ್ತಿ ಪ್ರದರ್ಶನವಾಗಲಿ... ರಾತ್ರಿ 9 ಗಂಟೆಗೆ ದೀಪ ಬೆಳಗಿಸೋಣ: ಕೊಹ್ಲಿ - ಪ್ರಧಾನಿ ಮೋದಿ ಮನವಿ

ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚುವಂತೆ ನಮೋ ಮನವಿ ಮಾಡಿದ್ದು, ಇದಕ್ಕೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೈ ಜೋಡಿಸಿದ್ದಾರೆ.

Virat kohli
Virat kohli

By

Published : Apr 5, 2020, 11:59 AM IST

Updated : Apr 5, 2020, 12:53 PM IST

ನವದೆಹಲಿ: ಕೊರೊನಾ ವೈರಸ್​​ನಿಂದಾಗಿ ಬರುವ ಏಪ್ರಿಲ್​ 14ರವರೆಗೆ ದೇಶದಲ್ಲಿ ಲಾಕ್​ಡೌನ್​ ಆದೇಶ ಹೇರಲಾಗಿದ್ದು, ಈ ವೇಳೇ ಮನೆಯಿಂದ ಹೊರಬರದಂತೆ ನಿರ್ದೇಶನ ನೀಡಲಾಗಿದೆ. ಇದೇ ವೇಳೆ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸುವಂತೆ ನಮೋ ಮನವಿ ಮಾಡಿದ್ದಾರೆ.

ನಮೋ ಮನವಿಗೆ ಇದೀಗ ಕೈಜೋಡಿಸಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ದೇಶದ ಜನರಲ್ಲಿ ಮನವಿ ಮಾಡಿಕೊಂಡು ಟ್ವೀಟ್​ ಮಾಡಿದ್ದಾರೆ.

ಮೈದಾನದ ಶಕ್ತಿ ಅಲ್ಲಿರುವ ಅಭಿಮಾನಿಗಳು.ಭಾರತದ ಶಕ್ತಿ ಇಲ್ಲಿರುವ ಜನರು. ಇಂದು ರಾತ್ರಿ 9 ಗಂಟೆ 9 ನಿಮಿಷಗಳ ಕಾಲ ವಿಶ್ವಕ್ಕೆ ನಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ನಾವೆಲ್ಲರೂ ಒಂದು ಎಂಬ ಒಗ್ಗಟ್ಟು ಪ್ರದರ್ಶಿಸಬೇಕು. ಆರೋಗ್ಯ ಯೋಧರಾಗಿ ನಾವು ಒಟ್ಟಿಗೆ ನಿಂತಿದ್ದೇವೆ ಎಂದು ತೋರಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.ಈಗಾಗಲೇ ದೇಶದ ಟಾಪ್​ 40 ಕ್ರೀಡಾಪಟುಗಳೊಂದಿಗೆ ನಮೋ ವಿಡಿಯೋ ಸಂವಾದ ನಡೆಸಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.

Last Updated : Apr 5, 2020, 12:53 PM IST

ABOUT THE AUTHOR

...view details