ಅಡಿಲೇಡ್:ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಭಾರತದ ಈ ಪ್ರದರ್ಶನಕ್ಕೆ ಹಲವು ಕ್ರಿಕೆಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್ ಮತ್ತು ಹೆಜಲ್‌ವುಡ್ ದಾಳಿಗೆ ತತ್ತರಿಸಿದ ಭಾರತ 36 ರನ್ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪ್ರದರ್ಶನವನ್ನು ತಮ್ಮದೇ ರೀತಿಯಲ್ಲಿ ಟೀಕಿಸಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್, "ಇದನ್ನು ಮರೆಯುವ ಒಟಿಪಿ 49204084041" ಎಂದು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಸ್ಕೋರ್‌ಗಳ ಅನುಕ್ರಮವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
"ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ರೀತಿ ನೋಡಿದ್ರೆ, ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಇಂದು ಬೆಳಗ್ಗೆ ಆಸೀಸ್ ನಿಜಕ್ಕೂ ಉತ್ತಮವಾಗಿ ಕಂಬ್ಯಾಕ್ ಮಾಡಿತು. ಸಂಪೂರ್ಣವಾಗುವವರೆಗೂ ಯಾವುದು ಮುಗಿಯುವುದಿಲ್ಲ, ಇದು ಟೆಸ್ಟ್ ಕ್ರಿಕೆಟ್‌ನ ಸೌಂದರ್ಯ. ದ್ವಿತಿಯಾರ್ಧದಲ್ಲಿ ಭಾರತವನ್ನು ಹಿಂದಿಕ್ಕಿದ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್, "ವಾಹ್ !! ಅಡಿಲೇಡ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೆಜಲ್‌ವುಡ್ ಬೌಲಿಂಗ್ ಪ್ರದರ್ಶನ ಅತ್ಯುತ್ತಮವಾಗಿತ್ತು"ಎಂದಿದ್ದಾರೆ.
1974 ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್ ಗಳಿಸಿದ್ದು ಭಾರತದ ಹಿಂದಿನ ಕಡಿಮೆ ಟೆಸ್ಟ್ ಸ್ಕೋರ್ ಆಗಿತ್ತು.