ಕರ್ನಾಟಕ

karnataka

ETV Bharat / sports

6,6,6,6,6...ಧೋನಿ ಅಬ್ಬರ ನೋಡಿ, ಐಪಿಎಲ್​ಗಾಗಿ ಸಖತ್​​​ ಸಜ್ಜಾಗ್ತಿದ್ದಾರೆ ಮಹೇಂದ್ರ! - ಇಂಡಿಯನ್​ ಪ್ರೀಮಿಯರ್​ ಲೀಗ್​

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅಬ್ಬರಿಸಲು ಮಹೇಂದ್ರ ಸಿಂಗ್​ ಧೋನಿ ಸಜ್ಜುಗೊಳ್ತಿದ್ದಾರೆ. ಕಳೆದ ಏಳು ತಿಂಗಳಿಂದ ಕ್ರಿಕೆಟ್​​ ಆಡಲು ಮೈದಾನಕ್ಕಿಳಿದಿದ್ದು,ತಮ್ಮ ಶಕ್ತಿ ಸಾಮರ್ಥ್ಯ ತೋರಿದ್ದಾರೆ. ಳಿಯದ ಮಾಹಿ ಇದೀಗ ಅಭ್ಯಾಸದಲ್ಲಿ ನಿರಂತರಾಗಿದ್ದಾರೆ.

Dhoni
ಮಹೇಂದ್ರ ಸಿಂಗ್​ ಧೋನಿ

By

Published : Mar 7, 2020, 7:34 AM IST

ಚೆನ್ನೈ: 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳಲು ಕೆಲ ದಿನ ಮಾತ್ರ ಉಳಿದಿವೆ. ಇದರ ಮಧ್ಯೆ ಎಲ್ಲ ಪ್ರಾಂಚೈಸಿ ಪ್ಲೇಯರ್ಸ್​​ ರನ್​ ಮಳೆ ಹರಿಸಲು ಸಜ್ಜುಗೊಳ್ತಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರರು ಸಹ ಸಖತ್​ ಆಗಿ ಸಜ್ಜಾಗುತ್ತಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ಗಾಗಿ ಸಖತ್​ ಆಗಿ ಸಜ್ಜಾಗುತ್ತಿದ್ದು, ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿರುವ ಮಹೇಂದ್ರ ಸಿಂಗ್​ ಧೋನಿ ಸತತವಾಗಿ ಐದು ಸಿಕ್ಸರ್​ ಬಾರಿಸಿ, ತಾವು ಮೈದಾನಕ್ಕಿಳಿಯಲು ಸಜ್ಜು ಎಂದು ತೋರಿಸಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ. ಮಾರ್ಚ್​ 2ರಿಂಧ ಅಭ್ಯಾಸದಲ್ಲಿ ಭಾಗಿಯಾಗಿರುವ ಮಹೇಂದ್ರ ಸಿಂಗ್​ ಧೋನಿ ಜತೆ ಸುರೇಶ್​ ರೈನಾ, ಮುರುಳಿ ವಿಜಯ್​ ಹಾಗೂ ಅಂಬಾಟಿ ರಾಯುಡು ಅಭ್ಯಾಸದಲ್ಲಿ ನಿರಂತರಾಗಿದ್ದಾರೆ.

ಇಲ್ಲಿಯವರೆಗೆ 190 ಐಪಿಎಲ್​ ಪಂದ್ಯಗಳಲ್ಲಿ ಭಾಗಿಯಾಗಿರುವ ಮಾಹಿ, 4,432ರನ್​​ಗಳಿಕೆ ಮಾಡಿದ್ದು, ಇದರಲ್ಲಿ 23 ಅರ್ಧಶತಕ ಸೇರಿಕೊಂಡಿವೆ. ಈ ಸಲದ ಟೂರ್ನಿ ಮಾರ್ಚ್​​ 29ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​- ಚೆನ್ನೈ ಸೂಪರ್​ ಕಿಂಗ್ಸ್​ ಸೆಣಸಾಟ ನಡೆಸಲಿವೆ.

ABOUT THE AUTHOR

...view details