ಕರ್ನಾಟಕ

karnataka

ETV Bharat / sports

ಉದ್ದೀಪನ ಮದ್ದು ಪ್ರಕರಣ: ಪೃಥ್ವಿ ಶಾಗೆ 8 ತಿಂಗಳ ಕಾಲ ಅಮಾನತು ಶಿಕ್ಷೆ

ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ಪೃಥ್ವಿ ಶಾ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದು, ಬಿಸಿಸಿಐನಿಂದ 8 ತಿಂಗಳ ಕಾಲ ಅಮಾನತು ಶಿಕ್ಷೆಗೊಳಗಾಗಿದ್ದಾರೆ.

ಪೃಥ್ವಿ ಶಾ ಅಮಾನತು

By

Published : Jul 30, 2019, 8:45 PM IST

ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್​​ಮನ್ ಪೃಥ್ವಿ ಶಾ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಫೇಲ್​ ಆಗಿದ್ದು, ಭಾರತೀಯ ಕ್ರಿಕೆಟ್​ ಮಂಡಳಿಯಿಂದ 8 ತಿಂಗಳ ಕಾಲ ಅಮಾನತು ಶಿಕ್ಷೆಗೊಳಗಾಗಿದ್ದಾರೆ.

ಇತ್ತೀಚೆಗೆ ನಡೆಸಲಾದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಶಾ ಅನುತ್ತೀರ್ಣರಾಗಿರುವ ಕಾರಣ ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಹೀಗಾಗಿ ನವೆಂಬರ್​ 15,2019ರವರೆಗೆ 19 ವರ್ಷದ ಅವರು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾಗಿಯಾಗುವಂತಿಲ್ಲ.

2018-19ನೇ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ವೇಳೆ ಈ ಯುವ ಕ್ರಿಕೆಟಿಗ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ, ಅಂದರೆ ಫೆಬ್ರವರಿ 22, 2019ರಂದು ಮೂತ್ರ ಪರೀಕ್ಷೆ ನಡೆಸಲಾಗಿತ್ತು. ಇದೀಗ ಅದರ ಫಲಿತಾಂಶ ಹೊರಬಿದ್ದಿದ್ದು, ಉದ್ದೀಪನಾ ಮದ್ದು ಸೇವನೆ ಸಾ ಬೀತಾಗಿದೆ.

ಈ ಹಿಂದೆ ಕೂಡ ಯೂಸೂಫ್ ಪಠಾಣ್​​, ಪ್ರದೀಪ್​ ಸಾಂಗ್ವಾನ್​ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ಸಸ್ಪೆಂಡ್‌ ಆಗಿದ್ದರು.

ಪೃಥ್ವಿ ಶಾ 2018ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಎರಡು ಟೆಸ್ಟ್​ ಪಂದ್ಯಗಳಲ್ಲಿ ಆಡಿದ್ದು, ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಸರಣಿಗೆ ಇವರು ಆಯ್ಕೆಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.

ABOUT THE AUTHOR

...view details