ಬ್ರಿಸ್ಬೇನ್ :ಸ್ಟೀವ್ ಸ್ಮಿತ್ ಈಗಾಗಲೇ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಹೆಚ್ಚು ತಪ್ಪು ಮಾಡದೇ ದೊಡ್ಡ ಪ್ರಮಾಣದಲ್ಲಿ ಬೆಲೆ ತೆತ್ತಿದ್ದಾರೆ. ಅವರು ವಿಮೋಚನೆ ಮಾಡಿಕೊಳ್ಳುವ ಸಲುವಾಗಿ ಟೆಸ್ಟ್ ತಂಡದ ನಾಯಕತ್ವಕ್ಕೆ ಮರಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. 2018 ಮಾರ್ಚ್ನಿಂದ ಈವರೆಗೂ ಟಿಮ್ ಪೇನ್ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆ್ಯರೋನ್ ಫಿಂಚ್ ಸೀಮಿತ್ ಓವರ್ಗಳ ತಂಡದ ನಾಯಕತ್ವ ನಿರ್ವಹಿಸುತ್ತಿದ್ದಾರೆ.
"ಇಲ್ಲಿಂದ 12 ರಿಂದ 18 ತಿಂಗಳವರೆಗೆ ಅವರು ಟೆಸ್ಟ್ ತಂಡದ ನಾಯಕತ್ವ ನಿರ್ವಹಿಸಬೇಕು. ಅದು ಅವರು ಸ್ವತಃ ಬಯಸಿದ್ರೆ ಮಾತ್ರ. ಯಾಕೆಂದರೆ, ಅವರಿಗೆ ವಿಮೋಚನೆ ಮಾಡಿಕೊಳ್ಳಲು ಒಂದು ಅವಕಾಶ ನೀಡಬೇಕಿದೆ"ಎಂದು ಹೀಲಿ ಆಸ್ಟ್ರೇಲಿಯಾ ಮಾಧ್ಯಮಕ್ಕೆ ಹೇಳಿದ್ದಾರೆ.