ಕರ್ನಾಟಕ

karnataka

ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಯಾದವ್, ತೆವಾಟಿಯಾ, ಕಿಶನ್​ರನ್ನು ಅಭಿನಂದಿಸಿದ ಸಚಿನ್

By

Published : Feb 21, 2021, 5:44 PM IST

ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ 5 ಪಂದ್ಯಗಳ ಟಿ-20 ಸರಣಿಗೆ 19 ಸದಸ್ಯರ ಭಾರತ ತಂಡವನ್ನು ಶನಿವಾರ ಬಿಸಿಸಿಐ ಘೋಷಿಸಿತ್ತು. ಇದರಲ್ಲಿ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸೂರ್ಯಕುಮಾರ್ ಯಾದವ್​, ಇಶಾನ್ ಕಿಶನ್ ಹಾಗೂ ಕಳೆದ ಐಪಿಎಲ್​ನಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದ ರಾಹುಲ್ ತೆವಾಟಿಯಾಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಿದೆ.

ಸಚಿನ್ ತೆಂಡೂಲ್ಕರ್​
ಸಚಿನ್ ತೆಂಡೂಲ್ಕರ್​

ಮುಂಬೈ​: ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಬಿಸಿಸಿಐ ಘೋಷಿಸಿರುವ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್​, ರಾಹುಲ್ ತೆವಾಟಿಯಾ ಮತ್ತು ಇಶಾನ್ ಕಿಶನ್​ ಅವರನ್ನು ಸಚಿನ್ ತೆಂಡೂಲ್ಕರ್​ ಅಭಿನಂದಿಸಿದ್ದಾರೆ.

ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ 5 ಪಂದ್ಯಗಳ ಟಿ-20 ಸರಣಿಗೆ 19 ಸದಸ್ಯರ ಭಾರತ ತಂಡವನ್ನು ಶನಿವಾರ ಬಿಸಿಸಿಐ ಘೋಷಿಸಿತ್ತು. ಇದರಲ್ಲಿ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸೂರ್ಯಕುಮಾರ್ ಯಾದವ್​, ಇಶಾನ್ ಕಿಶನ್ ಹಾಗೂ ಕಳೆದ ಐಪಿಎಲ್​ನಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದ ರಾಹುಲ್ ತೆವಾಟಿಯಾಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಿದೆ.

ಇನ್ನು ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ಗಾಯದ ಕಾರಣ ಹೊರಬಿದ್ದಿದ್ದ ತಮಿಳುನಾಡಿನ ವರುಣ್ ಚಕ್ರವರ್ತಿ ಕೂಡ ಮತ್ತೊಂದು ಅವಕಾಶ ಪಡೆದಿದ್ದು, ಅವರಿಗೆ ಕೂಡ ಮಾಸ್ಟರ್ ಬ್ಲಾಸ್ಟರ್​ ಅಭಿನಂದನೆ ಸಲ್ಲಿಸಿದ್ದಾರೆ.

ಸೂರ್ಯಕುಮಾರ್ ಯಾದವ್​, ಇಶಾನ್ ಕಿಶನ್, ರಾಹುಲ್ ತೆವಾಟಿಯಾ

ಭಾರತ ತಂಡಕ್ಕೆ ಮೊದಲ ಕರೆ ಪಡೆದಿರುವುದಕ್ಕೆ ನಿಮ್ಮನ್ನು ಮನಸಾರೆ ಅಭಿನಂದಿಸುತ್ತಿದ್ದೆನೆ ಇಶಾನ್ ಕಿಶನ್, ರಾಹುಲ್ ತೆವಾಟಿಯಾ, ಸೂರ್ಯಕುಮಾರ್ ಯಾದವ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಮಿಸ್​ ಮಾಡಿಕೊಂಡಿದ್ದ ವರುಣ್ ಚಕ್ರವರ್ತಿಗೂ ಕೂಡ ಅಭಿನಂದನೆ. ಭಾರತಕ್ಕಾಗಿ ಆಡುವುದು ಯಾವುದೇ ಕ್ರಿಕೆಟರ್​ಗೆ ಅತ್ಯಂತ ಗೌರವಯುತವಾಗಿರುತ್ತದೆ. ನಿಮಗೆ ಸಾಕಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ ಎಂದು ಸಚಿನ್ ಟ್ವೀಟ್​ ಮಾಡಿದ್ದಾರೆ.

ಸಚಿನ್ ಜೊತೆಗೆ ಭಾರತ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ವರುಣ್ ಚಕ್ರವರ್ತಿಗೆ ಅಭಿನಂದನೆ ಸಲ್ಲಿಸಿದ್ದು, ಈ ಹುಡುಗನಿಗೆ ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ ಎಂದಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್​, ಹರ್ಭಜನ್ ಸಿಂಗ್​, ಆರ್.​ಪಿ.ಸಿಂಗ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಅಭಿನಂದಿಸಿದ್ದಾರೆ.

ಇದದನ್ನು ಓದಿ:ಭಾರತ ತಂಡಕ್ಕೆ ಆಯ್ಕೆಯಾದ ಖುಷಿ.. ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ತೆವಾಟಿಯಾ ಅಬ್ಬರ..

ABOUT THE AUTHOR

...view details