ನವದೆಹಲಿ:ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಾಗಿ ನಾಳೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ಆಯ್ಕೆ ಸಮಿತಿ ಕೆಲವೊಂದು ಹೊಸ ಉದಯೋನ್ಮುಖ ಪ್ರತಿಭೆಗಳಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿ ಗೋಚರವಾಗುತ್ತಿದೆ.
ಅಗಸ್ಟ್ 3ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಸರಣಿ ಆಡಲಿದ್ದು, ಅದಕ್ಕಾಗಿ ನಾಳೆ ಆಯ್ಕೆ ಸಮಿತಿ ತಂಡ ಪ್ರಕಟ ಮಾಡಲಿದೆ. 2023ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕೆಲವೊಂದು ಹೊಸ ಪ್ರತಿಭೆಗಳಿಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ.
ವಿಶ್ವಕಪ್ನ ಮಧ್ಯದಲ್ಲೇ ಹೊರಬಿದ್ದಿರುವ ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಇದೀಗ ಫಿಟ್ ಆಗಿದ್ದು, ಒಬ್ಬರು ಚಾನ್ಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಅವರ ಸ್ಥಾನಕ್ಕೆ ನವದೀಪ್ ಸೈನಿ, ದೀಪಕ್ಚಹರ್ ಹಾಗೂ ಖಲೀಲ್ ಅಹ್ಮದ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.