ಕರ್ನಾಟಕ

karnataka

ETV Bharat / sports

ಮೊದಲ ಟೆಸ್ಟ್​​ ಪಂದ್ಯವೇ ಮುಗಿದಿಲ್ಲ, ನೆಟ್​​ನಲ್ಲಿ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ಅಭ್ಯಾಸ! - ಟೀಂ ಇಂಡಿಯಾ

ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯ ಮುಕ್ತಾಯಗೊಳ್ಳಲು ಇನ್ನು ಮೂರು ದಿನಗಳ ಕಾಲಾವಕಾಶವಿದ್ದು, ಇದರ ಮಧ್ಯೆ ಕೊಹ್ಲಿ ಪಡೆ 2ನೇ ಟೆಸ್ಟ್​​ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದೆ.

ಟೀಂ ಇಂಡಿಯಾ ಅಭ್ಯಾಸ

By

Published : Nov 15, 2019, 7:50 PM IST

ಇಂದೋರ್​​:ಬಾಂಗ್ಲಾದೇಶದ ವಿರುದ್ಧ ಇಂದೋರ್​ ಮೈದಾನದಲ್ಲಿ ಮೊದಲ ಟೆಸ್ಟ್​​ ಪಂದ್ಯ ನಡೆಯುತ್ತಿದ್ದು, ಈಗಷ್ಟೇ ಎರಡನೇ ದಿನ ಮುಕ್ತಾಯಗೊಂಡಿದೆ. ಇದರ ಮಧ್ಯೆ ಟೀಂ ಇಂಡಿಯಾ ಎರಡನೇ ಟೆಸ್ಟ್​​ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​​ ಮೈದಾನದಲ್ಲಿ ನವೆಂಬರ್​​ 22ರಿಂದ ಡೇ ನೈಟ್ ಮ್ಯಾಚ್ ಆರಂಭಗೊಳ್ಳಲಿದ್ದು, ಬಾಂಗ್ಲಾ ವಿರುದ್ಧದ ಹೊನಲು ಬೆಳಕಿನ ಟೆಸ್ಟ್​ ಕ್ರಿಕೆಟ್ ಪಂದ್ಯಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಟೀಂ ಇಂಡಿಯಾ ಪ್ಲೇಯರ್ಸ್ ಭರ್ಜರಿ​​ ಅಭ್ಯಾಸ ನಡೆಸಿದ್ದಾರೆ. ಇಂದೋರ್​ ಮೈದಾನದಲ್ಲೇ ಕೊಹ್ಲಿ ಪಡೆ ಪಿಂಕ್​ ಬಾಲ್​​ನಲ್ಲಿ ಅಭ್ಯಾಸ ನಡೆಸುತ್ತಿರುವ ಕೆಲ ಪೋಟೋಗಳು ಹೊರಬಿದ್ದಿವೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾ ಮೊದಲ ಇನ್ನಿಂಗ್ಸ್​​ನಲ್ಲಿ 150ರನ್​ಗಳಿಗೆ ಆಲೌಟ್​ ಆಗಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್​ ನಡೆಸುತ್ತಿರುವ ಟೀಂ ಇಂಡಿಯಾ 6 ವಿಕೆಟ್​ ನಷ್ಟಕ್ಕೆ 493ರನ್ ​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದೆ.

ABOUT THE AUTHOR

...view details