ಮೆಲ್ಬೋರ್ನ್: ಭಾರತ ತಂಡದ ತಾತ್ಕಾಲಿಕ ನಾಯಕನಾಗಿರುವ ಅಜಿಂಕ್ಯಾ ರಹಾನೆ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಶತಕ ಸಿಡಿಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಎಂಸಿಜಿಯಲ್ಲಿ 2 ಬಾರಿ ಶತಕ ಸಿಡಿಸಿದ ಎರಡನೇ ಭಾರತೀಯ ಎನಿಸಿಕೊಂಡಿರುವ ರಹಾನೆ ವೈಯಕ್ತಿಕವಾಗಿಯೂ ವಿಶೇಷ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಅದೇನೆಂದರೆ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 12 ಶತಕ ಬಾರಿಸಿದ್ದು, ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲೆ ಕಂಡಿಲ್ಲ ಎನ್ನುವುದೇ ಸಂತಸದ ಸಂಗತಿ.
ರಹಾನೆ 2013ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮುಂಬೈ ಬ್ಯಾಟ್ಸ್ಮನ್ ಟೆಸ್ಟ್ ಕ್ರಿಕೆಟ್ನಲ್ಲಿ 12 ಶತಕ ಸಿಡಿಸಿದ್ದಾರೆ. ಅದರಲ್ಲಿ ಭಾರತದಲ್ಲಿ 4 ಶತಕ ಹಾಗೂ ವಿದೇಶದಲ್ಲಿ 8 ಶತಕ ಸಿಡಿಸಿದ್ದಾರೆ. ಭಾರತ ಪರ ರಹಾನೆ ಸಿಡಿಸಿದ 12 ಶತಕಗಳಲ್ಲಿ 9 ಗೆಲುವು ತಂದುಕೊಟ್ಟಿದ್ದರೆ, 4ರಲ್ಲಿ ಡ್ರಾ ಸಾಧಿಸಿದೆ. ಇನ್ನು ರಹಾನೆ ಏಕದಿನ ಕ್ರಿಕೆಟ್ನಲ್ಲೂ 3 ಶತಕ ಬಾರಿಸಿದ್ದು ಅದರಲ್ಲೂ ಟೀಮ್ ಇಂಡಿಯಾ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ರಹಾನೆ ಶತಕಗಳ ಮತ್ತು ಫಲಿತಾಂಶ
- 2014ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 118 ರನ್- ಡ್ರಾ
- 2014ರಲ್ಲಿ ಇಂಗ್ಲೆಂಡ್ ವಿರುದ್ಧ 103 ರನ್-ಗೆಲುವು
- 2014ರಲ್ಲಿ ಆಸ್ಟ್ರೆಲಿಯಾ ವಿರುದ್ಧ 147 ರನ್ - ಡ್ರಾ
- 2015ರಲ್ಲಿ ಶ್ರೀಲಂಕಾ ವಿರುದ್ಧ 126 ರನ್- ಗೆಲುವು
- 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 127ರನ್-ಗೆಲುವು
- 2015ರಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ 100 ರನ್- ಗೆಲುವು
- 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 108ರನ್-ಡ್ರಾ
- 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 188ರನ್- ಗೆಲುವು
- 2017ರಲ್ಲಿ ಶ್ರೀಲಂಕಾ ವಿರುದ್ಧ 132 ರನ್-ಗೆಲುವು
- 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 102ರನ್-ಗೆಲುವು
- 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 115ರನ್-ಗೆಲುವು
- 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ 112ರನ್- ಗೆಲುವು