ಕರ್ನಾಟಕ

karnataka

ETV Bharat / sports

ಪಂತ್​ಗೆ ಸೂಕ್ತ ಬ್ಯಾಟಿಂಗ್​ ಕ್ರಮಾಂಕ ನೀಡುವಲ್ಲಿ ಟೀಂ​ ಇಂಡಿಯಾ ವಿಫಲ: ಕೈಫ್​ - ಮೊಹಮ್ಮದ್​ ಕೈಫ್​

ಧೋನಿ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ರಿಷಭ್‌ ಪಂತ್​ ತಮ್ಮ ವೃತ್ತಿ ಜೀವನದಲ್ಲಿ ಪಡೆದ ಉತ್ತಮ ಆರಂಭವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ. ಅದಕ್ಕೆ ಕಾರಣ ಅವರ ಬಗ್ಗೆ ಆಯ್ಕೆ ಸಮಿತಿ ಮಾಡುತ್ತಿರುವ ಆಲೋಚನೆಗಳ ಲೋಪದೋಷ. ಅವರಿಗೆ ಸರಿಯಾದ ಬ್ಯಾಟಿಂಗ್​ ಕ್ರಮಾಂಕವನ್ನು ಸೂಚಿಸುವ ವಿಚಾರದಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ಮೊಹಮ್ಮದ್ ಕೈಫ್‌ ಹೇಳಿದ್ದಾರೆ.

Rishabh Pant
ರಿಷಭ್​ ಪಂತ್​

By

Published : Jul 14, 2020, 4:00 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್​ ಕೀಪರ್​ ಧೋನಿ ಸ್ಥಾನಕ್ಕೆ ಮೊದಲ ಆಯ್ಕೆಯಾಗಿರುವ ರಿಷಭ್​ ಪಂತ್​ ವಿಚಾರದಲ್ಲಿ ಕ್ರಿಕೆಟ್ ಆಡಳಿತ ಮಂಡಳಿ ರೂಪಿಸುತ್ತಿರುವ ಆಲೋಚನೆಗಳಲ್ಲಿ ಹಲವು ಲೋಪದೋಷಗಳಿವೆ ಎಂದು ಕೈಫ್​ ಹೇಳುತ್ತಾರೆ.

ಧೋನಿ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ಪಂತ್​ ತಮ್ಮ ವೃತ್ತಿ ಜೀವನದಲ್ಲಿ ಪಡೆದ ಉತ್ತಮ ಆರಂಭವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದರು. ಅದಕ್ಕೆ ಕಾರಣ ಅವರ ಬಗ್ಗೆ ಆಯ್ಕೆ ಸಮಿತಿ ಮಾಡುತ್ತಿರುವ ಆಲೋಚನೆಗಳಲ್ಲಿನ ಲೋಪದೋಷ. ಅವರಿಗೆ ಸರಿಯಾದ ಬ್ಯಾಟಿಂಗ್​ ಕ್ರಮಾಂಕವನ್ನು ಸೂಚಿಸುವ ವಿಚಾರದಲ್ಲಿ ಗೊಂದಲ ಉಂಟಾಗುತ್ತಿದೆ ಎಂದು 39 ವರ್ಷದ ಮಾಜಿ ಆಟಗಾರ ವಿವರಿಸುತ್ತಾರೆ.

ಪಂದ್ಯದಲ್ಲಿ ರಿಷಭ್​ ಪಂತ್ ಮತ್ತು ಧೋನಿ​

ಪಂತ್​ ಒಬ್ಬ ಸ್ಫೋಟಕ ಆಟಗಾರ. ನೀವು ಅವನಿಗೆ ಒಂದು ಕ್ರಮಾಂಕವನ್ನು ಸೆಟ್​ ಮಾಡಿಕೊಟ್ಟರೆ, ಆತ ಆ ಜಾಗದಲ್ಲಿ ಆಡುತ್ತಾನೆ. ಮತ್ತು ಇದರಿಂದ ಆತನಿಗೆ ಹೆಚ್ಚು ಓವರ್​ಗಳ ತನಕ ಆಡಲು ಆಗುತ್ತದೆ. ಆತ ಸ್ಫೋಟಕ ಬ್ಯಾಟ್ಸ್​ಮನ್​. ತಾನು ಎದುರಿಸುವ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಮುಂದಾಗುತ್ತಾನೆ. ಆದ್ದರಿಂದ ಆತನಿಗೆ ನಿರ್ದಿಷ್ಠ ಕ್ರಮಾಂಕದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಐಪಿಎಲ್​ನಲ್ಲಿ ನಾನು, ಪಾಂಟಿಂಗ್ ಹಾಗೂ ದಾದಾ ಸೇರಿ ಪಂತ್ ಅವ​ರನ್ನು 3 ಅಥವಾ 4 ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಆದರೆ ನಾವು ಬ್ಯಾಟಿಂಗ್​ ಕ್ರಮಾಂಕ ಯಾವುದೇ ಆಗಲಿ, ಪಂತ್​ಗೆ ಕೊನೇಯ 60 ಓವರ್​ಗಳ ಆಟ ಸಿಗುವಂತೆ ನೋಡಿಕೊಂಡೆವು. ಕೊನೆಯ 10 ಓವರ್​ಗಳಲ್ಲಿ ಆತ ಆಟದ ದಿಕ್ಕನ್ನೇ ಬದಲಿಸಬಲ್ಲ ಎಂದು ನಾವು ನಂಬಿದ್ದೇವೆ. ಇದೇ ರೀತಿ ಭಾರತ ತಂಡದಲ್ಲೂ ಪಂತ್​ಗೆ ಒಂದು ನಿರ್ದಿಷ್ಟ ಕ್ರಮಾಂಕದ ಅವಶ್ಯಕತೆಯಿದೆ ಎಂದು ಕೈಫ್​, ಆಕಾಶ್​ ಚೋಪ್ರಾ ಜೊತೆಗಿನ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

ABOUT THE AUTHOR

...view details