ಫ್ಲೋರಿಡಾ: ಟಿ20 ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
2ನೇ ಟಿ20 ಕದನ... ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ - 2ನೇ ಟಿ20 ಕದನ
ಎರಡನೇ ಟಿ20 ಕದನದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಿಂಡೀಸ್ ತಂಡ ಕ್ಯಾಂಪ್ಬೆಲ್ರನ್ನು ತಂಡದಿಂದ ಕೈಬಿಟ್ಟು ಪಿಯಿರೆಗೆ ಅವಕಾಶ ನೀಡಿದೆ.
Team India captain Kohli
ಮೊದಲ ಟಿ20 ಕದನದಲ್ಲಿ ಬೌಲರ್ಗಳ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ 4 ವಿಕೆಟ್ಗಳ ಗೆಲುವು ಸಾಧಿಸಿತ್ತು. 2ನೇ ಟಿ20 ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಬಯಸಿರುವ ಭಾರತ ತಂಡ ಮೊದಲ ಪಂದ್ಯದ ತಂಡವನ್ನೇ ಮುಂದುವರಿಸಿದೆ.
ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿಂಡೀಸ್ ತಂಡ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಆರಂಭಿಕ ಬ್ಯಾಟ್ಸ್ಮನ್ ಕ್ಯಾಂಪ್ಬೆಲ್ ಬದಲಿಗೆ ಖಾರಿ ಪಿಯಿರೆ ತಂಡ ಸೇರಿಕೊಳ್ಳಲಿದ್ದಾರೆ. ಆರಂಭಿಕರಾಗಿ ನರೈನ್ ಕಣಕ್ಕಿಳಿಯಲಿದ್ದಾರೆ.