ಬ್ರಿಸ್ಬೇನ್: ಬ್ರಿಸ್ಬೇನ್ನಲ್ಲಿ 32 ವರ್ಷಗಳಿಂದ ಸೋಲು ಕಾಣದೇ ಮೆರೆಯುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಆಘಾತ ನೀಡಿದೆ. ಮಂಗಳವಾರ ನಡೆದ ಕೊನೆಯ ಪಂದ್ಯದಲ್ಲಿ ರಿಷಭ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 3 ವಿಕೆಟ್ಗಳ ಜಯ ಸಾಧಿಸಿ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯಾದ ಸತತ ಗೆಲುವಿನ ದಾಖಲೆಗಳಿಗೆ 4ನೇ ಬಾರಿ ಬ್ರೇಕ್ ಹಾಕಿದ ಭಾರತ! - Australia test records
ಐದು ಸಲ ವಿಶ್ವಕಪ್ ಎತ್ತಿ ಹಿಡಿದಿರುವ ಹಾಗೂ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ, ಸೋಲಿಲ್ಲದ ದಾಖಲೆಗಳನ್ನು ಮಾಡುತ್ತ ಮೆರೆಯುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಭಂಗತಂದಿದೆ.ಅವುಗಳಲ್ಲಿ ಕೆಲವು ಪ್ರಮುಖ ಘಟನೆಗಳು ಇಲ್ಲಿವೆ.
ಭಾರತ vs ಆಸ್ಟ್ರೇಲಿಯಾ
ಐದು ಸಲ ವಿಶ್ವಕಪ್ ಎತ್ತಿ ಹಿಡಿದಿರುವ ಹಾಗೂ ಘಟಾನುಘಟಿ ತಂಡಗಳಿಗೆ ಮಣ್ಣು ಮುಕ್ಕಿಸಿ, ಸೋಲಿಲ್ಲದ ದಾಖಲೆಗಳನ್ನು ಮಾಡುತ್ತ ಮೆರೆಯುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಭಂಗತಂದಿದೆ. ಅವುಗಳಲ್ಲಿ ಕೆಲವು ಪ್ರಮುಖ ಘಟನೆಗಳು ಇಲ್ಲಿವೆ.
- ಟೆಸ್ಟ್ ಕ್ರಿಕೆಟ್ನಲ್ಲಿ ಸತತ 16 ಪಂದ್ಯಗಳಲ್ಲಿ ಸೋಲು ಇಲ್ಲದೆ ಮೆರೆದಾಡುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ 2001ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಸೋಲುಣಿಸಿತ್ತು. ಅಲ್ಲದೆ ಸರಣಿಯನ್ನು ಗೆದ್ದು ಇತಿಹಾಸ ಬರೆದಿತ್ತು.
- ಪರ್ತ್ನ ವಾಕಾ (ವೆಸ್ಟರ್ನ್ ಆಸ್ಟ್ರೇಲಿಯನ್ ಕ್ರಿಕೆಟ್ ಅಸೋಸಿಯೇಷನ್) ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡವನ್ನ ಟೆಸ್ಟ್ ಪಂದ್ಯದಲ್ಲಿ ಮಣಿಸಿದ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- 2015ರ ವಿಶ್ವಕಪ್ ನಂತರ ತವರಿನಲ್ಲಿ ಸತತ 19 ಏಕದಿನ ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಆಸೀಸ್ಗೆ ಧೋನಿ ನೇತೃತ್ವದ ಭಾರತ ತಂಡ 2016ರಲ್ಲಿ ಸಿಡ್ನಿಯಲ್ಲಿ ಸೋಲುಣಿಸುವ ಮೂಲಕ ಚಾಂಪಿಯನ್ನರಿಗೆ ಆಘಾತ ನೀಡಿತ್ತು.
- 1988ರಿಂದ ಬ್ರಿಸ್ಬೇನ್ನಲ್ಲಿ ಸೋಲು ಕಾಣದೇ ಮೆರೆಯುತ್ತಿದ್ದ ಕಾಂಗರೂ ಪಡೆಗೆ ಕೊನೆಗೂ ಸೋಲಿನ ರುಚಿ ತೋರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಗಬ್ಬಾದಲ್ಲಿ ಆಡಿದ್ದ 55 ಪಂದ್ಯಗಳಲ್ಲಿ 33 ಜಯ 13 ಡ್ರಾ ಮತ್ತು ಒಂದು ಟೈ ಸಾಧಿಸಿತ್ತು. ಆದರೆ 1988ರ ನಂತರ ಈ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿರಲಿಲ್ಲ. ಇದೀಗ ಭಾರತ ತಂಡ ಆ ದಾಖಲೆಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ.