ಕರ್ನಾಟಕ

karnataka

ETV Bharat / sports

ಸೆಮೀಸ್​​ನಲ್ಲಿ ಕಳಪೆ ಬ್ಯಾಟಿಂಗ್‌: ಸಹಾಯಕ​ ಕೋಚ್​ ಬಂಗಾರ್​ ತಲೆದಂಡ? - ಸಂಜಯ್​ ಬಂಗಾರ್​

ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದು, ಇದೀಗ ಬ್ಯಾಟಿಂಗ್ ಕೋಚ್‌​ ಸಂಜಯ್​ ಬಂಗಾರ್ ತಲೆದಂಡವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಸಹಾಯಕ​ ಕೋಚ್​ ಬಂಗಾರ್​ ತಲೆದಂಡ

By

Published : Jul 12, 2019, 7:44 PM IST

Updated : Jul 13, 2019, 11:50 AM IST

ಮುಂಬೈ:ವಿಶ್ವಕಪ್​ ಸೆಮಿಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ, ಟೂರ್ನಿಯಿಂದ ಹೊರಬಿದ್ದಿದ್ದು, ಇದೀಗ ತಂಡದ ಬ್ಯಾಟಿಂಗ್​ ಕೋಚ್​ ಸಂಜಯ್​ ಬಂಗಾರ್​ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದೆ.

ಈಗಾಗಲೇ ಮುಖ್ಯ ಕೋಚ್​ ರವಿಶಾಸ್ತ್ರಿ ಅವರ ಜತೆಗಿನ ಒಪ್ಪಂದವನ್ನ 45 ದಿನಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ಸಹಾಯಕ ಕೋಚ್​ ಆಗಿರುವ ಸಂಜಯ್​ ಬಂಗಾರ್​ ಅವರನ್ನ ಬ್ಯಾಟಿಂಗ್​​ ಕೋಚ್​​ ಹುದ್ದೆಯಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.

ಬಿಸಿಸಿಐ

ವಿಶ್ವಕಪ್​​ನಲ್ಲಿ ಬ್ಯಾಟಿಂಗ್​​,ಫೀಲ್ಡಿಂಗ್​ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಬ್ಯಾಟಿಂಗ್​​ನಲ್ಲಿ ಕೆಲ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕಾರಣ​ ಕೋಚ್​ ತಲೆದಂಡವಾಗುವ ಲಕ್ಷಣಗಳು ಕಾಣಿಸುತ್ತಿವೆ. ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಶ್ರೀಧರ್ ಆಟಗಾರರ ಗುಣಮಟ್ಟ ವೃದ್ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಟಿಂಗ್​ ಕೋಚ್​ ಇದರಲ್ಲಿ ವಿಫಲಗೊಂಡಿರುವ ಕಾರಣ ಬಿಸಿಸಿಐ ವೆಸ್ಟ್​ ಇಂಡೀಸ್​ ಸರಣಿಗೂ ಮೊದಲೇ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಇಂಗ್ಲೆಂಡ್​ನಿಂದ ಬಂದ ತಕ್ಷಣ ಬಿಸಿಸಿಐ ಆಡಳಿತಾತ್ಮಕ ಮಂಡಳಿ ಸಭೆ ನಡೆಸಲಿದ್ದು, ಕೆಲವೊಂದು ಮಹತ್ವದ ಕ್ರಮ ಕೈಗೊಳ್ಳುವ ಸುಳಿವು ಸಿಕ್ಕಿದೆ.

Last Updated : Jul 13, 2019, 11:50 AM IST

ABOUT THE AUTHOR

...view details