ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ವಿರುದ್ದದ ಸುದೀರ್ಘ ಪ್ರವಾಸಕ್ಕಾಗಿ ಸಿಡ್ನಿ ತಲುಪಿದ ಕೊಹ್ಲಿ ಬಳಗ - ಮೂರು ಏಕದಿನ ಪಂದ್ಯ

ನವೆಂಬರ್​ 27ರಿಂದ ಪ್ರವಾಸದ ಮೊದಲ ಪಂದ್ಯ ಏಕದಿನ ಕ್ರಿಕೆಟ್​ ಮೂಲಕ ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಆರಂಭವಾಗಲಿದೆ. 29ರಂದು ಇದೇ ಮೈದಾನದಲ್ಲಿ 2ನೇ ಪಂದ್ಯ ನಡೆದರೆ, ಡಿಸೆಂಬರ್ 2 ರಂದು ಕೊನೆಯ ಏಕದಿನ ಹಾಗೂ ಡಿಸೆಂಬರ್ 4ರಂದು ಮೊದಲ ಟಿ20 ಕಾನ್ಬೆರಾದಲ್ಲಿ ನಡೆಯಲಿದೆ. ನಂತರ ಡಿಸೆಂಬರ್​ 6 ಮತ್ತು 8 ರಂದು ಕೊನೆಯ 2 ಟಿ20 ಪಂದ್ಯಗಳು ಸಿಡ್ನಿಯಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ದದ ಸುದೀರ್ಘ ಪ್ರವಾಸಕ್ಕಾಗಿ ಸಿಡ್ನಿ ತಲುಪಿದ ಕೊಹ್ಲಿ ಬಳಗ
ವಿರಾಟ್​ ಕೊಹ್ಲಿ

By

Published : Nov 12, 2020, 6:27 PM IST

ಸಿಡ್ನಿ: ನವೆಂಬರ್ 27ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಸರಣಿಗಾಗಿ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಗುರವಾರ ಸಿಡ್ನಿ ತಲುಪಿದೆ.

ಐಪಿಎಲ್ ಮುಗಿದ ಬಳಿಕ ಬುಧವಾರ ರಾತ್ರಿ ಕೊಹ್ಲಿ ಮತ್ತು ಬಳಗ ಪಿಪಿಇ ಕಿಟ್​ ಮತ್ತು ಮಾಸ್ಕ್​ ಧರಿಸಿ ದುಬೈನಲ್ಲಿ ವಿಮಾನವೇರಿದ್ದರು. ಇಂದು ಸಿಡ್ನಿಗೆ ತಲುಪಿರುವ ತಂಡ, ಅಲ್ಲಿ ಎರಡು ವಾರಗಳ ಕಾಲ ಕ್ವಾರಂಟೈನ್​ ನಲ್ಲಿರಲಿದೆ.

ಕೆಎಲ್​ ರಾಹುಲ್

ಭಾರತೀಯರ ಜೊತೆಗೆ ಐಪಿಎಲ್​ನ ಭಾಗವಾಗಿದ್ದ ಸ್ಟಿವ್ ಸ್ಮಿತ್, ಟೇವಿಡ್ ವಾರ್ನರ್​ ಸೇರಿದಂತೆ ಆಸ್ಟ್ರೇಲಿಯಾ ಆಟಗಾರರು ಕೂಡ ತಮ್ಮ ಸಿಟಿಯನ್ನು ತಲುಪಿದ್ದಾರೆ. ಇದೀಗ ಎಲ್ಲಾ ಆಟಗಾರರು ಕಡ್ಡಾಯವಾಗಿರುವ ಎರಡು ವಾರಗಳ ಕ್ವಾರಂಟೈನ್​ನಲ್ಲಿರಬೇಕಾಗಿದೆ.

ಸ್ಟಿವ್ ಸ್ಮಿತ್

ನವೆಂಬರ್​ 27ರಿಂದ ಪ್ರವಾಸದ ಮೊದಲ ಪಂದ್ಯ ಏಕದಿನ ಕ್ರಿಕೆಟ್​ ಮೂಲಕ ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಆರಂಭವಾಗಲಿದೆ. 29ರಂದು ಇದೇ ಮೈದಾನದಲ್ಲಿ 2ನೇ ಪಂದ್ಯ ನಡೆದರೆ, ಡಿಸೆಂಬರ್ 2 ರಂದು ಕೊನೆಯ ಏಕದಿನ ಹಾಗೂ ಡಿಸೆಂಬರ್ 4ರಂದು ಮೊದಲ ಟಿ20 ಕಾನ್ಬೆರಾದಲ್ಲಿ ನಡೆಯಲಿದೆ. ನಂತರ ಡಿಸೆಂಬರ್​ 6 ಮತ್ತು 8 ರಂದು ಕೊನೆಯ 2 ಟಿ20 ಪಂದ್ಯಗಳು ಸಿಡ್ನಿಯಲ್ಲಿ ನಡೆಯಲಿವೆ.

ಡಿಸೆಂಬರ್​ 17 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್​ ಅಡಿಲೇಡ್​ನಲ್ಲಿ ಆರಂಭವಾಗಲಿದೆ.

ABOUT THE AUTHOR

...view details