ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾಕ್ಕೆ ಗಾಯದ ಮೇಲೆ ಬರೆ: ವೇಗಿ ನವದೀಪ್ ಸೈನಿಗೂ ಇಂಜುರಿ - ನವದೀಪ್ ಸೈನಿ ಲೇಟೆಸ್ಟ್ ನ್ಯೂಸ್

ಈಗಾಗಲೆ ಹಲವು ಆಟಗಾರರು ಗಾಯಗೊಂಡಿದ್ದ ಪರಿಣಾಮ ಸೈನಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದರು. ಪ್ರಮುಖ ವೇಗಿಗಳಿಲ್ಲದ ತಂಡಕ್ಕೆ ಸೈನಿ ಆಸರೆಯಾಗಬಲ್ಲರು ಎಂದು ಊಹಿಸಲಾಗಿತ್ತು. ಆದರೆ, ಅವರು ಕೂಡ ಗಾಯಕ್ಕೆ ತುತ್ತಾಗಿರುವುದು ಆಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Navdeep Saini Injury
ವೆಗಿ ನವದೀಪ್ ಸೈನಿ ಇಂಜುರಿ

By

Published : Jan 15, 2021, 11:01 AM IST

Updated : Jan 15, 2021, 11:08 AM IST

ಬ್ರಿಸ್ಬೇನ್: ಟೀಂ ಇಂಡಿಯಾ ಆಟಗಾರರ ಗಾಯಾಳುಗಳ ಪಟ್ಟಿ ದಿನೇ ದಿನೆ ಬೆಳೆಯುತ್ತಿದ್ದು ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ವೇಗಿ ನವದೀಪ್ ಸೈನಿ ತೊಡೆಸಂದು ನೋವಿಗೆ ತುತ್ತಾಗಿದ್ದಾರೆ.

36ನೇ ಓವರ್​ನಲ್ಲಿ​ ಬೌಲಿಂಗ್ ಮಾಡುತ್ತಿದ್ದ ಸೈನಿ ತೊಡೆಸಂದು ನೋವಿಗೆ ಒಳಗಾದ್ರು. ನಂತರ ಮೈದಾನಕ್ಕೆ ಬಂದ ಫಿಸಿಯೋ, ಸೈನಿ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಕ್ಕೆ ಕರೆದೊಯ್ದರು. ಸೈನಿ ಬದಲು ರೋಹಿತ್ ಶರ್ಮಾ ಆ ಓವರ್​ ಅನ್ನು ಪೂರ್ಣಗೊಳಿಸಿದ್ರು.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ನವದೀಪ್ ಸೈನಿ ಅವರು ತೊಡೆಸಂದು ನೋವಿನ ಬಗ್ಗೆ ಒಳಗಾಗಿದ್ದಾರೆ. ಪ್ರಸ್ತುತ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.

ಈಗಾಗಲೇ ಹಲವು ಆಟಗಾರರು ಗಾಯಗೊಂಡಿದ್ದ ಪರಿಣಾಮ ಸೈನಿ ಟೀಂ ಇಂಡಿಯಾದಲ್ಲಿ ಅವಕಾಶಪಡೆದಿದ್ದರು. ಪ್ರಮುಖ ವೇಗಿಗಳಿಲ್ಲದ ತಂಡಕ್ಕೆ ಸೈನಿ ಆಸರೆಯಾಗಬಲ್ಲರು ಎಂದು ಊಹಿಸಲಾಗಿತ್ತು. ಆದರೆ, ಅವರು ಕೂಡ ಗಾಯಕ್ಕೆ ತುತ್ತಾಗಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Last Updated : Jan 15, 2021, 11:08 AM IST

ABOUT THE AUTHOR

...view details