ಕರ್ನಾಟಕ

karnataka

ETV Bharat / sports

ಸಸೆಕ್ಸ್​ ಪುರುಷ ತಂಡದ ವಿಕೆಟ್ ಕೀಪಿಂಗ್ ಕೋಚ್ ಆಗಿ ಸಾರಾ ಟೇಲರ್​ ನೇಮಕ - ಇಂಗ್ಲೆಂಡ್ ತಂಡದ ಮಹಿಳಾ ವಿಕೆಟ್ ಕೀಪರ್ ಸಾರಾ ಟೇಲರ್​

ಮುಂಬರುವ ಋತುವಿನಿಂದ ಸಸೆಕ್ಸ್​ ಕ್ರಿಕೆಟ್​ ಸಾರಾ ಟೇಲರ್ ಮತ್ತು ಆಶ್ಲೇ ರೈಟ್ ಅವರನ್ನು ನಮ್ಮ ತರಬೇತುದಾರರ ಬಳಗಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಘೋಷಿಸಲು ಸಂತೋಷವಾಗುತ್ತಿದೆ ಎಂದು ಸಸೆಕ್ಸ್

ಸಸೆಕ್ಸ್​ ಪುರುಷ ತಂಡ
ಸಾರಾ ಟೇಲರ್​

By

Published : Mar 17, 2021, 5:50 AM IST

ಲಂಡನ್:ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವಿಕೆಟ್ ಕೀಪರ್​ ಬ್ಯಾಟ್ಸ್​ವುಮೆನ್ ಸಸೆಕ್ಸ್​ ಪುರುಷರ ತಂಡಕ್ಕೆ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಆಶ್ಲೇ ರೈಟ್​ರನ್ನು ಕೂಡ ಕೋಚ್​​ ಸಿಬ್ಬಂದಿಯಾಗಿದೆ ಸೇರಿಸಿಕೊಂಡಿದೆ.

ಮುಂಬರುವ ಋತುವಿನಿಂದ ಸಸೆಕ್ಸ್​ ಕ್ರಿಕೆಟ್​ ಸಾರಾ ಟೇಲರ್ ಮತ್ತು ಆಶ್ಲೇ ರೈಟ್ ಅವರನ್ನು ನಮ್ಮ ತರಬೇತುದಾರರ ಬಳಗಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಘೋಷಿಸಲು ಸಂತೋಷವಾಗುತ್ತಿದೆ ಎಂದು ಸಸೆಕ್ಸ್​ ಕ್ರಿಕೆಟ್​ ಕ್ಲಬ್​ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರಾ ಕ್ಲಬ್​ನ ವಿಕೆಟ್​ ಕೀಪರ್​ಗಳ ಜೊತೆ ಕೆಲಸ ಮಾಡಲಿದ್ದಾರೆ. ಅವರು 13 ವರ್ಷಗಳ ವೃತ್ತಿ ಜೀವನದಲ್ಲಿ ಇಂಗ್ಲೆಂಡ್ ಪರ 226 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಮಹಿಳಾ ವಿಕೆಟ್ ಕೀಪರ್​ಗಳಲ್ಲಿ ಅತಿ ಹೆಚ್ಚು ಬ್ಯಾಟ್ಸ್​ಮನ್​ಗಳನ್ನು ಔಟ್​ ಮಾಡಿದ ದಾಖಲೆ ಹೊಂದಿದ್ದಾರೆ. ಸಾರಾ 227 ಬಲಿಪಡೆದಿದ್ದಾರೆ. ಬ್ಯಾಟಿಂಗ್​ನಲ್ಲೂ ಉತ್ತಮ ಪ್ರದರ್ಶಿಸಿರುವ ಅವರು 7000ಕ್ಕೂ ಹೆಚ್ಚು ರನ್​ಗಳಿಸಿದ್ದಾರೆ.

ABOUT THE AUTHOR

...view details