ಡಾಕಾ: ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸುವ ಮೂಲಕ ಬಾಂಗ್ಲಾದೇಶದ ಪರ ವೈಯಕ್ತಿಕ ಗರಿಷ್ಠ ರನ್ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಔಟಾಗದೇ 334 ರನ್ಗಳಿಸಿ ದಾಖಲೆ ಬರೆದ ತಮೀಮ್ ಇಕ್ಬಾಲ್! - ತಮೀಮ್ ಇಕ್ಬಾಲ್ 334
ಭಾನುವಾರ ಮಿರ್ಪುರ್ನಲ್ಲಿ ನಡೆದ ಬಾಂಗ್ಲಾದೇಶ ಕ್ರಿಕೆಟ್ ಲೀಗ್ನಲ್ಲಿ ಈಸ್ಟ್ ಜೋನ್ ಪರ ಆಡುತ್ತಿರುವ ತಮೀಮ್ ಸೆಂಟಲ್ ಜೋನ್ ವಿರುದ್ಧ ಬರೋಬ್ಬರಿ 334 ರನ್ಗಳಿಸಿ ಔಟಾಗದೇ ಉಳಿಯುವ ಮೂಲಕ ಬಾಗ್ಲಾದೇಶದ ಪ್ರಥಮ ದರ್ಜೆ ಕ್ರಿಕೆಟ್ ಚರಿತ್ರೆಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.

426 ಎಸೆತಗಳನ್ನು ಎದುರಿಸಿ ತಮೀಮ್ 42 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ತ್ರಿಶತಕ ಸಿಡಿಸಿದರು. ಈ ಮೂಲಕ ಬಾಂಗ್ಲಾದೇಶದ ಪರ ತ್ರಿಶತಕ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಹಿಂದೆ 2007ರಲ್ಲಿ ರಕಿಬುಲ್ 313 ರನ್ಗಳಿಸಿದ್ದರು. ಇದೀಗ ರಕಿಬುಲ್ ತಂಡದ ವಿರುದ್ಧವೇ ಅವರ ದಾಖಲೆಯನ್ನು ಇಕ್ಬಾಲ್ ಮುರಿದಿದ್ದಾರೆ.