ಕರ್ನಾಟಕ

karnataka

ETV Bharat / sports

ಐಸಿಸಿ ಟಿ20 ರ‍್ಯಾಂಕಿಂಗ್: ಅಗ್ರಸ್ಥಾನಕ್ಕೇರಿದ ಡೇವಿಡ್​ ಮಲನ್​, ಟಾಪ್​ 10ರಲ್ಲಿ ಉಳಿದ ವಿರಾಟ್​-ರಾಹುಲ್ - ಟಾಪ್​ 10ರಲ್ಲಿ ವಿರಾಟ್​-ರಾಹುಲ್​

ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರಿ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಡೇವಿಡ್​ ಮಲನ್​ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಂಬರ್​ ಒನ್​ ಸ್ಥಾನಕ್ಕೇರಿದ್ದಾರೆ.

ಐಸಿಸಿ ಟಿ20 ಶ್ರೇಯಾಂಕ
ಐಸಿಸಿ ಟಿ20 ಶ್ರೇಯಾಂಕ

By

Published : Sep 9, 2020, 4:17 PM IST

ಸೌತಾಂಪ್ಟನ್​: ಭಾರತದ ಕೆಎಲ್​ ರಾಹುಲ್​ ಹಾಗೂ ವಿರಾಟ್​ ಕೊಹ್ಲಿ ಐಸಿಸಿ ನೂತನವಾಗಿ ಬಿಡುಗಡೆ ಮಾಡಿರುವ ಟಿ20 ಶ್ರೇಯಾಂಕದಲ್ಲಿ ಟಾಪ್​ 10ರಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಹುಲ್​ 2 ಸ್ಥಾನ ಕಳೆಗಿಳಿದು 4ನೇ ಸ್ಥಾನದಲ್ಲಿದ್ದರೆ, ವಿರಾಟ್ ಒಂದು ಸ್ಥಾನ ಬಡ್ತಿ ಪಡೆದು​ 9ನೇ ಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರಿ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಡೇವಿಡ್​ ಮಲನ್​ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಂಬರ್​ ಒನ್​ ಸ್ಥಾನಕ್ಕೇರಿದ್ದಾರೆ.

ಡೇವಿಡ್​ ಮಲನ್​ಗೆ ಅಗ್ರ ಶ್ರೇಯಾಂಕ

ಮಲನ್​ ಮೂರು ಪಂದ್ಯಗಳಿಂದ 129 ರನ್​ಗಳಿಸಿದ್ದರು. ಮೊದಲ ಪಂದ್ಯದಲ್ಲಿ 66 ರನ್​ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಕಳೆದ ವರ್ಷ ನವೆಂಬರ್​ನಲ್ಲಿ 2ನೇ ಶ್ರೇಯಾಂಕ ಪಡೆದಿದ್ದದ್ದು ಇಲ್ಲಿಯವರೆಗಿನ ಶ್ರೇಷ್ಠ ಶ್ರೇಯಾಂಕವಾಗಿತ್ತು. ಇದೀಗ ಸುಮಾರು 2 ವರ್ಷಗಳ ಕಾಲ ಟಿ20 ಕ್ರಿಕೆಟ್​ನಲ್ಲಿ ಮೊದಲ ಸ್ಥಾನ ಆಕ್ರಮಿಸಿದ್ದ ಬಾಬರ್​ ಅಜಮ್​ರನ್ನು ಹಿಂದಿಕ್ಕಿದ್ದಾರೆ. ಮಲನ್​ ಬಾಬರ್​ಗಿಂತ 8 ರೇಟಿಂಗ್​ ಪಾಯಿಂಟ್​ ಮುಂದಿದ್ದಾರೆ.

2 ಪಂದ್ಯಗಳಿಂದ 121 ರನ್​ ಸಿಡಿಸಿದ್ದ ಬಟ್ಲರ್​ 40 ರಿಂದ 28ನೇ ಸ್ಥಾನಕ್ಕೆ, ಬೈರ್ಸ್ಟೋವ್​ 22 ರಿಂದ 19ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ನಾಯಕ ಆ್ಯರೋನ್​ ಫಿಂಚ್​ 3 ಹಾಗೂ ಮ್ಯಾಕ್ಸ್​ವೆಲ್​ 6ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅವರು ಆಲ್​ರೌಂಡರ್​ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಅಫ್ಘಾನಿಸ್ತಾನದ ನಬಿ ಅಗ್ರಸ್ಥಾನದಲ್ಲಿದ್ದಾರೆ.

ಬೌಲಿಂಗ್​ ಶ್ರೇಯಾಂಕದಲ್ಲಿ ಇಂಗ್ಲೆಂಡ್​ ತಂಡದ ರಶೀದ್​ 2 ಸ್ಥಾನ ಏರಿಕೆ ಕಂಡು 7ನೇ ಸ್ಥಾನಕ್ಕೂ, ಆಸ್ಟ್ರೇಲಿಯಾದ ಆಶ್ಟನ್​ ಅಗರ್​ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಅಫ್ಘಾನಿಸ್ಥಾನದ ರಶೀದ್​ ಖಾನ್​ ಹಾಗೂ ಮುಜೀವ್​ ಉರ್​ ರೆಹಮಾನ್​ ಇದ್ದಾರೆ.

ತಂಡದ ಶ್ರೇಯಾಂಕದಲ್ಲಿ ಕೊನೆಯ ಪಂದ್ಯ ಗೆದ್ದ ಆಸ್ಟ್ರೇಲಿಯಾ(275) ಮೊದಲ ಸ್ಥಾನವನ್ನು ಮರಳಿ ಪಡೆದಿದೆ. ಎರಡನೇ ಪಂದ್ಯದ ನಂತರ 273 ಅಂಕ ಪಡೆದು ಅಗ್ರಸ್ಥಾನಕ್ಕೇರಿದ್ದ ಇಂಗ್ಲೆಂಡ್(271)​ ಕೊನೆಯ ಪಂದ್ಯದ ಸೋಲಿನೊಂದಿಗೆ ಮತ್ತೆ 2 ಅಂಕ ಕಳೆದುಕೊಂಡು 2ನೇ ಸ್ಥಾನಕ್ಕೆ ಕುಸಿದಿದೆ. ಭಾರತ(266) ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.

ABOUT THE AUTHOR

...view details