ಹೊಬಾರ್ಟ್ :ಟಿ 20 ಕ್ರಿಕೆಟ್‌ನ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾದ ನೇಪಾಳಿ ಕ್ರಿಕೆಟಿಗ ಸಂದೀಪ್ ಲಮಿಚಾನೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ.
ಸಂದೀಪ್ ಲಮಿಚಾನೆ, ಬಿಗ್ಬ್ಯಾಷ್ ಲೀಗ್ನಲ್ಲಿ ಹೋಬಾರ್ಟ್ ಹರಿಕೇನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಟೂರ್ನಿ ಪ್ರಾರಂಭವಾಗುವುದಕ್ಕೆ ಎರಡು ವಾರ ಇರುವಾಗ ಲೆಗ್ಸ್ಪಿನ್ನರ್ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
"ನಾನು ಕೋವಿಡ್-19 ಸೋಂಕಿಗೆ ತುತ್ತಾಗಿದ್ದೇನೆ ಎಂದು ನಿಮಗೆ ತಿಳಿಸುವುದು ನನ್ನ ಪ್ರಾಮಾಣಿಕ ಕರ್ತವ್ಯ. ಬುಧವಾರದಿಂದ ದೇಹದಲ್ಲಿ ಕೋಂಚ ನೋವು ಕಾಣಿಸಿತ್ತು. ಆದರೆ, ಈಗ ನನ್ನ ಆರೋಗ್ಯ ಸ್ವಲ್ಪ ಸುಧಾರಿಸುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ನಾನು ಮತ್ತೆ ಮೈದಾನಕ್ಕೆ ಮರಳುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ನೇಪಾಳಿ ಕ್ರಿಕೆಟರ್ ಸಂದೀಪ್ ಲಮಿಚಾನೆ ಸದ್ಯ ವಿಶ್ವದ ಎಲ್ಲಾ ಟಿ-20 ಲೀಗ್ ಆಡುತ್ತಾ ಗಮನ ಸೆಳೆಯುತ್ತಿದ್ದಾರೆ. 2018ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಲಮಿಚಾನೆ ನಂತರದಲ್ಲಿ ಬಿಗ್ಬ್ಯಾಷ್, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿದ್ದಾರೆ.