ಲಂಡನ್:2019 ಮೇನಲ್ಲಿ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಇದೀಗ ಗುರುವಾರದಿಂದ ಶುರುವಾಗಲಿರುವ ಟಿ20 ಬ್ಲಾಸ್ಟ್ನಲ್ಲಿ ಯಾರ್ಕ್ಶೈರ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
ರೂಟ್ ಅಂತಾರಾಷ್ಟ್ರೀಯ ಟಿ20 ತಂಡದ ಖಾಯಂ ಸದಸ್ಯರಾಗಿಲ್ಲವಾದ್ದರಿಂದ ಕೆಲವು ಸಮಯ ಚುಟುಕು ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಲು ಇಂಗ್ಲೆಂಡ್ ನಿರ್ವಹಣ ಮಂಡಳಿಯನ್ನು ಕೇಳಿಕೊಂಡಿದ್ದಾರೆ ಎಂದು ಯಾರ್ಕ್ಶೈರ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ನಂತರ ಈ ನಿರ್ದಾರ ತೆಗೆದುಕೊಂಡಿದ್ದು, ಗುರುವಾರ ನಾಟಿಂಗ್ಹ್ಯಾಮ್ಶೈರ್ ವಿರುದ್ಧದ ಪಂದ್ಯದಲ್ಲಿ ರೂಟ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಯಾರ್ಕ್ಶೈರ್ ಕೋಚ್ ಆ್ಯಂಡ್ರ್ಯೂ ಗೇಲ್ ತಿಳಿಸಿದ್ದಾರೆ.
ಗುರುವಾರ(ನಾಳೆ) ಅವರು ಖಂಡಿತ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾನುವಾರ ತಂಡವನ್ನು ಆಯ್ಕೆ ಮಾಡಲಿದೆ. ಹಾಗಾಗಿ ರೂಟ್ ಭಾನುವಾರ ಡರ್ಬಿಶೈರ್ ವಿರುದ್ಧ ಹಾಗೂ ಸೋಮವಾರ ನಾಟ್ಸ್ ವಿರುದ್ಧದ ಪಂದ್ಯಗಳಲ್ಲಿ ಆಡಲಿದ್ದಾರೆ.
29 ರ ಹರೆಯ ರೂಠ್ ಈವರೆಗೆ ಇಂಗ್ಲೆಂಡ್ ಪರ 32 ಟಿ 20 ಪಂದ್ಯಗಳನ್ನಾಡಿದ್ದಾರೆ. 125 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ 893 ರನ್ ಗಳಿಸಿದ್ದಾರೆ.