ಕರ್ನಾಟಕ

karnataka

ETV Bharat / sports

ಟಿ-20 ಕ್ರಿಕೆಟ್​ನಲ್ಲಿ 7 ವಿಕೆಟ್​ ಪಡೆದು ವಿಶ್ವದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾದ ಬೌಲರ್ - ಅಕೆರ್​ಮನ್​ ವಿಶ್ವದಾಖಲೆ

ಕೇವಲ 18 ರನ್​ ನೀಡಿ 7 ವಿಕೆಟ್​ ಪಡೆಯುವ ಮೂಲಕ ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್​ ದಾಖಲೆ ನಿರ್ಮಿಸಿದ್ದಾರೆ.

T20 Blast

By

Published : Aug 8, 2019, 4:36 PM IST


ಲಂಡನ್​:ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಕಾಲಿನ್ ಅಕೆರ್​ಮನ್​​ ಟಿ-20 ಬ್ಲಾಸ್ಟ್​ ಲೀಗ್​ನಲ್ಲಿ 7 ವಿಕೆಟ್​ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಲೈಸೆಸ್ಟರ್​ಶೈರ್​​ ತಂಡದ ಪರ ಆಡುತ್ತಿರುವ ಅಕೆರ್​ಮನ್ ​ ಬುಧವಾರ ನಡೆದ ಪಂದ್ಯದಲ್ಲಿ ವಾರ್​ವಿಕ್​ಶೈರ್​ ತಂಡದ ವಿರುದ್ಧ 4 ಓವರ್​ಗಳಲ್ಲಿ 18 ರನ್​ ನೀಡಿ 7 ವಿಕೆಟ್​ ಪಡೆದರು. 7 ವಿಕೆಟ್​ಗಳಲ್ಲಿ 6 ವಿಕೆಟ್​ಗಳನ್ನು ತಮ್ಮ ಕೊನೆಯ 2 ಓವರ್​ಗಳಲ್ಲಿ ಪಡೆದಿದ್ದು ವಿಶೇಷವಾಗಿದೆ.

ನಾಲ್ವರು ಬ್ಯಾಟ್ಸ್​ಮನ್​ಗಳನ್ನು ಬೌಲ್ಡ್​ ಹಾಗೂ ಮೂವರು ಕ್ಯಾಚ್​ ನೀಡಿ ಆಕೆರ್​ಮನ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಅಕೆರ್​ಮನ್​ ಬ್ಯಾಟಿಂಗ್​ ಆಲ್​ರೌಂಡರ್​ ಆಗಿರುವುದರಿಂದ ಈ ಸಾಧನೆ ವಿಶೇಷವಾಗಿದೆ. ಇವರ ಬೌಲಿಂಗ್​ ನೆರವಿನಿಂದ ​ಲೈಸೆಸ್ಟರ್​ಶೈರ್ 55 ರನ್​ಗಳ ವಿಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ್ದ ಲೈಸೆಸ್ಟರ್​ಶೈರ್ ತಂಡ 189 ರನ್​ಗಳಿಸಿತ್ತು. 19 ರನ್​ಗಳ ಗುರಿ ಪಡೆದಿದ್ದ ಲೈಸೆಸ್ಟರ್​ಶೈರ್ ಅಕೆರ್​ಮನ್​ ಬೌಲಿಂಗ್​ ದಾಳಿಗೆ ಸಿಲುಕಿ 17.4 ಓವರ್​ಗಳಲ್ಲಿ 134 ರನ್​ಗಳಿಗೆ ಆಲೌಟ್​ ಆಗುವ ಮೂಲಕ 55 ರನ್​ಗಳ ಸೋಲುಕಂಡಿತು.

ಇವರಿಗೂ ಮೊದಲು ಕಡಿಮೆ ರನ್​ ನೀಡಿ ಹೆಚ್ಚು ವಿಕೆಟ್​ ಪಡದಿದ್ದ ದಾಖಲೆ ಮಲೇಶಿಯಾದ ಅರುಲ್​ ಸುಪ್ಪಯ್ಯ ಹೆಸರಿನಲ್ಲಿತ್ತು. 2011ರಲ್ಲಿ ಸಮರ್​ಸೆಟ್​ ಪರ ಆಡಿದ್ದ ಅವರು 5 ರನ್​ನೀಡಿ 6 ವಿಕೆಟ್​ ಪಡೆದಿದ್ದ​​ರು

ABOUT THE AUTHOR

...view details