ರಿಚ್ಮಂಡ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಇಂಗ್ಲೆಂಡ್ನ ಟಿ-20 ಬ್ಲಾಸ್ಟ್ನಲ್ಲಿ ಎದುರಾಳಿ ಬೌಲರ್ಗಳನ್ನು ಬ್ಲಾಸ್ಟ್ ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಟಿ-20 ಬ್ಲಾಸ್ಟ್ನಲ್ಲಿ ಕಾಣಿಸಿಕೊಂಡಿರುವ ಎಬಿಡಿ ಮಿಡ್ಲ್ಸೆಕ್ಸ್ ತಂಡದ ಪರ ಆಡಿರುವ 4 ಪಂದ್ಯಗಳಲ್ಲಿ 189 ರನ್ ಸಿಡಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಭಾನುವಾರ ನಡೆದ ಸಮರ್ಸೆಟ್ ವಿರುದ್ಧ ತಮ್ಮ ನೈಜ ಆಟ ಪ್ರದರ್ಶಸಿರುವ ಎಬಿಡಿ 35 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿದ್ದಾರೆ.