ಕರ್ನಾಟಕ

karnataka

ETV Bharat / sports

ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ತಂಡ ಸೇರಿಕೊಂಡ ಟಿ.ನಟರಾಜನ್​!

ಕಾಂಗರೂ ನಾಡಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿರುವ ವೇಗದ ಬೌಲರ್ ಟಿ.ನಟರಾಜನ್ ಇದೀಗ ತಮಿಳುನಾಡು ತಂಡದ ಪರ ವಿಜಯ್ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

T. Natarajan
T. Natarajan

By

Published : Feb 4, 2021, 7:42 PM IST

ಚೆನ್ನೈ:ಟೀಂ ಇಂಡಿಯಾದ ವೇಗಿ ಟಿ.ನಟರಾಜನ್​ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಮಿಂಚು ಹರಿಸಿದ್ದು, ಇದೀಗ ತಮಿಳುನಾಡು ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಗಾಗಿ ಪ್ರಕಟಗೊಂಡಿರುವ ತಂಡದಲ್ಲಿ ವೇಗಿ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ: ರಿಷಭ್ ಪಂತ್ ಸೇರಿ ನಾಳೆಯ ಪಂದ್ಯದ ಗೇಮ್​ ಪ್ಲ್ಯಾನ್​ ಬಗ್ಗೆ ಕೊಹ್ಲಿ ಮಾತು: ವಿಡಿಯೋ

ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಈಗಾಗಲೇ ಸೈಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಗೆದ್ದಿದ್ದು, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದೆ.

ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟಿ.ನಟರಾಜನ್​, ಸದ್ಯ ಆಸ್ಟ್ರೇಲಿಯಾ ವಿರುದ್ಧದ ಮೊದಲೆರೆಡು ಟೆಸ್ಟ್​​ ಸರಣಿಯಲ್ಲಿ ಸೇರಿಕೊಂಡಿಲ್ಲ. ಹೀಗಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಟಿ. ನಟರಾಜನ್ ಆಯ್ಕೆಯಾಗಿದ್ದು, ಇದೀಗ ಬಿಸಿಸಿಐನಿಂದ ಅನುಮತಿ ಪಡೆದುಕೊಳ್ಳುವುದು ಅತಿ ಅವಶ್ಯವಾಗಿದೆ.

ತಮಿಳುನಾಡು ತಂಡ:ದಿನೇಶ್​ ಕಾರ್ತಿಕ್​(ಕ್ಯಾಪ್ಟನ್​, ವಿ.ಕೀ), ಬಾಬಾ ಅಪರಂಜಿತ್​(ಉ.ನಾಯಕ), ಬಿ. ಇದ್ರಜಿತ್​, ಕೆ.ಬಿ ಅರುಣ್​ ಕಾರ್ತಿಕ್​, ಹರಿ ನಿಶಾಂತ್​, ಶಾರೂಖ್​ ಖಾನ್​,ಎನ್ ಜಗದೀಶನ್​, ಎಲ್​. ಸೂರ್ಯಪ್ರಕಾಶ್​, ಕೌಶಿಕ್ ಗಾಂಧಿ,ಜೆ. ಕೌಶಿಕ್​,ಮುರುಗನ್​ ಅಶ್ವಿನ್​,ಸಾಯಿ ಕಿಶೋರ್​,ಎಂ ಸಿದ್ಧಾರ್ಥ್​, ಸೋನು ಯಾದವ್​, ಕೆ.ವಿಗ್ರೇಶ್​, ಟಿ.ನಟರಾಜನ್​, ಅಶ್ವಿನ್​​ ಕ್ರಿಸ್ಟ್​, ಪ್ರದೂಷ್​ ರಂಜನ್​ ಪಾಲ್​, ಜಿ.ಪರಿಯಾಸಿಮ್​ ಹಾಗೂ ಎಂ ಮೊಹಮ್ಮದ್​

ABOUT THE AUTHOR

...view details