ಸೂರತ್:ಸಯ್ಯದ್ ಮುಶ್ತಾಕ್ ಅಲಿ ಟಿ-20 ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಹಿನ್ನಡೆ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ ಆರಂಭದಲ್ಲೇ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಳ್ತು. ತಾವು ಎದುರಿಸಿದ 2ನೇ ಎಸೆತದಲ್ಲೇ ಶೂನ್ಯಕ್ಕೆ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕ್ಯಾಪ್ಟನ್ ಮನೀಷ್ ಪಾಂಡೆ(4), ಕರುಣ್ ನಾಯರ್(8) ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಿಂದ ತಂಡ ಕೇವಲ 19 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಈ ವೇಳೆ ಪಡಿಕ್ಕಲ್(57) ಹಾಗೂ ರೋಹನ್ ಕದಂ(71) ತಂಡಕ್ಕೆ ಸ್ವಲ್ಪ ಮಟ್ಟದ ಚೇತರಿಕೆ ನೀಡಿ ತಂಡದ ಮೊತ್ತ 150ರ ಗಡಿ ದಾಟುವಂತೆ ಮಾಡಿದ್ರು.
ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಇದರ ಬೆನ್ನತ್ತಿದ್ದ ಮುಂಬೈ ತಂಡ ಆರಂಭದಲ್ಲಿ ಸ್ಫೋಟಕ ಪ್ರಾರಂಭ ಪಡೆದುಕೊಳ್ತು. ಪೃಥ್ವಿ ಶಾ ತಾವು ಎದುರಿಸಿದ 17 ಎಸೆತಗಳಲ್ಲಿ 30 ರನ್ ಗಳಿಸಿದ್ರು.