ಕರ್ನಾಟಕ

karnataka

ETV Bharat / sports

ಸೈಯದ್ ಮುಷ್ತಾಕ್ ಅಲಿ ಟೂರ್ನಿ.. ಬಿಹಾರ್ ಬಗ್ಗುಬಡಿದ ಮನೀಷ್​ ಪಡೆ..! - ಸೈಯದ್ ಮುಷ್ತಾಕ್ ಅಲಿ ಟೂರ್ನಿ ಸುದ್ದಿ

ಕರ್ನಾಟಕ ಹಾಗೂ ಬಿಹಾರ್ ನಡುವಿನ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಕರುಣ್ ನಾಯರ್ ಪಡೆ 9 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಕರುಣ್ ನಅಯರ್ ಹಾಗೂ ದೇವದತ್ ಪಡಿಕ್ಕಲ್

By

Published : Nov 15, 2019, 5:28 PM IST

Updated : Nov 16, 2019, 2:14 PM IST

ವಿಶಾಖಪಟ್ಟಣಂ: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್​ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡ ಬಿಹಾರವನ್ನು 9 ವಿಕೆಟ್​​ಗಳಿಂದ ಮಣಿಸಿದೆ.

ಮೊದಲು ಬ್ಯಾಟ್ ಮಾಡಿದ ಬಿಹಾರ ತಂಡ 106 ರನ್ನಿಗೆ ಸರ್ವಪತನವಾಯಿತು. ಬಿಹಾರ ತಂಡದ ಪರ ಬಬುಲ್ ಕುಮಾರ್ 41, ರಹ್ಮತುಲ್ಲಾ 23 ರನ್ ಸಿಡಿಸುವ ಮೂಲಕ ಮೂರಂಕಿ ಮೊತ್ತ ದಾಖಲಿಸಲು ನೆರವಾದರು. ಕರ್ನಾಟಕದ ಪರ ಪ್ರವೀಣ್ ದುಬೆ,ರೋನಿತ್ ಮೋರೆ,ಕೆ ಕೆ ವಾಸುಕಿ, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಿತ್ತರು.

ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ, 11.2 ಓವರ್​ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಕರ್ನಾಟಕ ತಂಡದ ಕರುಣ್ ನಾಯರ್ 36 ಎಸೆತದಲ್ಲಿ 65 ಹಾಗೂ ದೇವದತ್ ಪಡಿಕ್ಕಲ್ 28 ಎಸೆತದಲ್ಲಿ 37 ರನ್ ಸಿಡಿಸಿ ಸುಲಭ ಜಯ ದೊರಕಿಸಿಕೊಟ್ಟರು.

Last Updated : Nov 16, 2019, 2:14 PM IST

ABOUT THE AUTHOR

...view details