ಹೈದರಾಬಾದ್:ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಕೊನೆಗೂ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿದೆ.
ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಜನವರಿ 18ರಂದು ಉತ್ತರ ಪ್ರದೇಶದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 5 ವಿಕೆಟ್ಗಳ ಸುಲಭ ಗೆಲುವು ಕಂಡಿತ್ತು. ಈ ಮೂಲಕ ಕರ್ನಾಟಕ ತಂಡ ಎಲೈಟ್ ಗ್ರೂಪ್ನ 'ಎ' ಯಲ್ಲಿ ಪಂಜಾಬ್ ಬಳಿಕ ದ್ವಿತೀಯ ಸ್ಥಾನದೊಂದಿಗೆ ಲೀಗ್ ಹಂತದ ಸ್ಪರ್ಧೆ ಮುಗಿಸಿತ್ತು.
ಅಗ್ರಸ್ಥಾನದಲ್ಲಿರುವ ಪಂಜಾಬ್ 5 ಪಂದ್ಯಗಳಲ್ಲಿ 5 ಗೆದ್ದು 20 ಪಾಯಿಂಟ್ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕ 5ರಲ್ಲಿ 4 ಗೆದ್ದು 16 ಪಾಯಿಂಟ್ಸ್ ಕಲೆ ಹಾಕಿದೆ. ತಮಿಳುನಾಡು ತಂಡ ಈಗಾಗಲೇ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ. ಕ್ವಾರ್ಟರ್ ಫೈನಲ್ನ ಎಲ್ಲ ಪಂದ್ಯಗಳು ಅಹ್ಮದಾಬಾದ್ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿವೆ.