ಸೂರತ್:ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ತಂಡ 13 ರನ್ಗಳ ರೋಚಕ ಗೆಲುವು ಸಾಧಿಸಿದೆ.
ಕರ್ನಾಟಕ ನೀಡಿದ 190 ರನ್ಗಳ ಬೃಹತ್ ಗುರಿಯನ್ನು ತಲುಪುವಲ್ಲಿ ಎಡವಿದ ಜಾರ್ಖಂಡ್ ತಂಡ ನಿಗದಿತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 176 ಗಳಿಸಿ 13 ರನ್ಗಳಿಂದ ಸೋಲೊಪ್ಪಿಕೊಂಡಿತು.
ಜಾರ್ಖಂಡ್ ಪರ ವಿರಾಟ್ ಸಿಂಗ್ 76, ಆನಂದ್ ಸಿಂಗ್ 41 ಹಾಗೂ ಸುಮಿತ್ ಕುಮಾರ್ 23 ರನ್ಗಳ ಕಾಣಿಕೆ ನೀಡಿದರು. ಉತ್ತಮ ದಾಳಿ ನಡೆಸಿದ ಪವನ್ ದೇಶ್ಪಾಂಡೆ 2 ವಿಕೆಟ್ ಕಿತ್ತರು.
ಮತ್ತೆ ಮಿಂಚಿದ ಪಡಿಕ್ಕಲ್, ರಾಹುಲ್:
ಮೊದಲು ಬ್ಯಾಟ್ ಮಾಡಿದ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಭರವಸೆಯ ಆರಂಭಿಕರಾದ ದೇವದತ್ ಪಡಿಕ್ಕಲ್ ಹಾಗೂ ಕೆ ಎಲ್ ರಾಹುಲ್ ಮೊದಲ ವಿಕೆಟ್ಗೆ 114 ರನ್ ಜೊತೆಯಾಟ ನೀಡಿದರು.
ಮಿಂಚಿನ ಅರ್ಧಶತಕ ಗಳಿಸಿದ ಪಡಿಕ್ಕಲ್ 63 ರನ್(30) ಗಳಿಸಿ ಔಟಾದರು. ರಾಹುಲ್ ಆಟ 36 ರನ್ನಿಗೆ ಅಂತ್ಯವಾಯಿತು.ಮನೀಷ್ ಪಾಂಡೆ 16, ಕರುಣ್ ನಾಯರ್ 19 ಗಳಿಸಿ ಪೆವಿಲಿಯನ್ ಸೇರಿದರು. ನಂತರದಲ್ಲಿ ಉತ್ತಮ ಜೊತೆಯಾಟ ಬರದ ಪರಿಣಾಮ 200ಕ್ಕೂ ಅಧಿಕ ಮೊತ್ತದ ನಿರೀಕ್ಷೆಯಲ್ಲಿದ್ದ ರಾಜ್ಯ ತಂಡ 20 ಓವರ್ನಲ್ಲಿ 6 ವಿಕೆಟ್ಗೆ 189 ಗಳಿಸಲಷ್ಟೆ ಶಕ್ತವಾಯಿತು.